ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗವು ಎಲ್ಲ ಜಾತಿ, ಮತ, ಧರ್ಮ, ಸಂಪ್ರದಾಯಗಳನ್ನು ಮೀರಿದ್ದು: ಪ್ರಧಾನಿ ಮೋದಿ

Last Updated 21 ಜೂನ್ 2019, 4:21 IST
ಅಕ್ಷರ ಗಾತ್ರ

ರಾಂಚಿ:ದೇಶದ ಅಭಿವೃದ್ಧಿ, ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆಯೋಗ ಅತ್ಯಗತ್ಯ. ಪ್ರತಿದಿನ ಮೊಬೈಲ್‌ನ ಆ್ಯಪ್‌ಗಳ ಅಪ್‌ಡೇಟ್ ಆಗುವಂತೆ ನಾವುಯೋಗದ ಮೂಲಕ ದೇಹ ಮನಸ್ಸುಗಳು ಅಪ್‌ಡೇಟ್ ಮಾಡಬೇಕು ಎಂದು ಪ್ರಧಾನಿನರೇಂದ್ರ ಮೋದಿ ಹೇಳಿದ್ದಾರೆ

ವಿಶ್ವ ಯೋಗ ದಿನದಪ್ರಯುಕ್ತ ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ನಡೆದವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರುಯೋಗವು ಜನರಲ್ಲಿ ಒಗ್ಗಟ್ಟು ಬೆಳೆಸುತ್ತದೆ. ವಿಶ್ವದ ಮುಂದಿರುವ ಹಲವು ಸವಾಲುಗಳಿಗೆ ಯೋಗದಲ್ಲಿ ಪರಿಹಾರವಿದೆ. ಶಾಂತಿ, ಸದ್ಭಾವನೆ ಮತ್ತು ಸಮೃದ್ಧಿಗಾಗಿ ಯೋಗವನ್ನುಪಸರಿಸೋಣ ಎಂದು ಕರೆ ನೀಡಿದರು.

ಉತ್ತಮ ದೇಹ, ಸ್ವಸ್ಥ ಮನಸ್ಸು ಇರದಿದ್ದರೆ ಯಾವುದೇ ಕನಸು ನನಸಾಗಲು ಸಾಧ್ಯವಿಲ್ಲ. ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯುತ್ತಮ ಮಾರ್ಗ ಯೋಗ ಎನ್ನುವುದು ಎಲ್ಲ ಜಾತಿ, ಮತ, ಧರ್ಮ, ಸಂಪ್ರದಾಯಗಳನ್ನು ಮೀರಿದ್ದು. ಕೇವಲ ಕೆಲವೇ ನಿಮಿಷಗಳಲ್ಲಿ ಮುಗಿಸುವ ಕಸರತ್ತು ಯೋಗವಲ್ಲ. ಅದು ಜೀವನವಿಡೀ ಅನುಸರಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ಯೋಗದ ಮಹತ್ವವನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT