ಮುಂದಿನ 6 ತಿಂಗಳಲ್ಲಿ ಮೋದಿ ಉದ್ಘಾಟಿಸಲಿರುವ ಯೋಜನೆಗಳ ವಿವರ ಸಲ್ಲಿಸಲು ಆದೇಶ

ನವದೆಹಲಿ: 2019 ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮುಂದಿನ 6 ತಿಂಗಳುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿರುವ ಎಲ್ಲ ಯೋಜನೆಗಳ ವಿವರಗಳನ್ನು ಸಲ್ಲಿಸಲು ಪ್ರಧಾನಿಯವರ ಕಚೇರಿ ಕೇಂದ್ರ ಸಚಿವರಿಗೆ ಆದೇಶಿಸಿದೆ.
ದಿ ಇಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಯೋಜನೆಯ ವಿವರ, ನಿಧಿಯ ಮೂಲ ( ಕೇಂದ್ರ ಸರ್ಕಾರದ ನಿಧಿಯದ್ದೋ ಅಥವಾ ರಾಜ್ಯ ಸರ್ಕಾರದ್ದು) ಮತ್ತು ಆ ಯೋಜನೆಯ ಅನುಮತಿ ದಾಖಲೆಗಳೆಲ್ಲವೂ ಸರಿಯಾಗಿದೆ ಎಂಬುದರ ಬಗ್ಗೆ ಕೇಂದ್ರ ಸಚಿವರು ವಿವರಗಳನ್ನು ಸಲ್ಲಿಸಬೇಕಿದೆ.
ಮೂಲಸೌಕರ್ಯಗಳಿಗೆ ಸಂಬಂಧಿಸಿದ ಸಚಿವಾಲಯಗಳಾದ ವಸತಿ ಮತ್ತು ನಗರ ವ್ಯವಹಾರಗಳು, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ರೈಲ್ವೆ, ನಾಗರಿಕ ವಿಮಾನಯಾನ ಮೊದಲಾದ ಕಾರ್ಯಕ್ಷೇತ್ರಗಳಲ್ಲಿ ಮುಂದಿನ 6 ತಿಂಗಳೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.
ಈ ಎಲ್ಲ ಯೋಜನೆಗಳು ಅನುಮತಿ ಪಡೆದು ಪೂರ್ಣಗೊಂಡಿದೆ ಎಂಬ ದಾಖಲೆಯನ್ನು ನೀಡಬೇಕೆಂದು ಪ್ರಧಾನಿ ಕಚೇರಿ ಹೇಳಿದೆ
ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಅಲ್ಲಿನ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಧಾನಿ ಕಚೇರಿ ನಿರ್ದೇಶಿಸಿದೆ.
ಬರಹ ಇಷ್ಟವಾಯಿತೆ?
10
2
0
2
0
0 comments
View All