ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ ಅಂತ್ಯಕ್ಕೆ 1 ಕೋಟಿ ನೋಂದಣಿ ಗುರಿ

ಪ್ರಧಾನಮಂತ್ರಿ ಶ್ರಮ್‌ ಯೋಗಿ ಮಾನ್‌–ಧನ್‌ ಪಿಂಚಣಿ ಯೋಜನೆ
Last Updated 24 ಮಾರ್ಚ್ 2019, 20:22 IST
ಅಕ್ಷರ ಗಾತ್ರ

ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ನೀಡುವ ಪ್ರಧಾನ್‌ ಮಂತ್ರಿ ಶ್ರಮ್‌ ಮಾನ್‌–ಧನ್‌ ಪಿಂಚಣಿಗೆ ಏಪ್ರಿಲ್ ತಿಂಗಳ ಅಂತ್ಯದ ಒಳಗೆ 1 ಕೋಟಿ ಮಂದಿಯನ್ನು ನೋಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಾಭ ಏನು ?

* 60 ವರ್ಷ ತುಂಬಿದ ಬಳಿಕ ತಿಂಗಳಿಗೆ ಕನಿಷ್ಠ 3 ಸಾವಿರ ಪಿಂಚಣಿ ದೊರೆಯುತ್ತದೆ

* 18ರಿಂದ 40 ವರ್ಷದ ಒಳಗಿನವರು ನೋಂದಣಿಗೆ ಅರ್ಹರು

ಪ್ರೀಮಿಯಂ ಮೊತ್ತ ಎಷ್ಟು ?

* ನೋಂದಣಿ ಮಾಡುವ ವ್ಯಕ್ತಿಯ ವಯಸ್ಸಿನ ಆಧಾರದ ಮೇಲೆ ಪ್ರೀಮಿಯಂ ಮೊತ್ತ ನಿಗದಿ

* ವ್ಯಕ್ತಿಗಳು ಪಾವತಿಸುವ ಪ್ರೀಮಿಯಂ ಮೊತ್ತದಷ್ಟೇ ಸರ್ಕಾರದಿಂದಲೂ ಅವರ ಖಾತೆಗೆ ಹಣ ಹೂಡಿಕೆ

***

18 ವರ್ಷ: ₹55

29 ವರ್ಷ: ₹100

40 ವರ್ಷ: ₹200

ನೋಂದಣಿ ಹೇಗೆ ?

3.19 ಲಕ್ಷ: ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ

2.99 ಲಕ್ಷ: ಗ್ರಾಮೀಣ ಭಾಗದಲ್ಲಿರುವ ಸೇವಾ ಕೇಂದ್ರಗಳ ಸಂಖ್ಯೆ

10 ಕೋಟಿ: ಮುಂದಿನ 5 ವರ್ಷಗಳಲ್ಲಿ ಯೋಜನೆಗೆ ನಿಗದಿಪಡಿಸಿರುವ ನೋಂದಣಿ ಗುರಿ

ಯಾರು ಅರ್ಹರು ?

ಮನೆಗೆಲಸದವರು, ಕೂಲಿಕಾರ್ಮಿಕರು, ಹಮಾಲಿಗಳು, ರಿಕ್ಷಾ ಎಳೆಯುವವರು, ಭೂರಹಿತ ಕಾರ್ಮಿಕರು, ಬಟ್ಟೆ ಶುಚಿಗೊಳಿಸುವವರು, ಕಟ್ಟಡ ಕಾರ್ಮಿಕರು, ಚಿಂದಿ ಆಯುವವರು.

***

ಈಗಾಗಲೇ 25.36 ಲಕ್ಷ ಮಂದಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು, ಪ್ರತಿ ದಿನ 1 ಲಕ್ಷ ಮಂದಿ ಹೊಸತಾಗಿ ಸೇರ್ಪಡೆಯಾಗುತ್ತಿದ್ದಾರೆ. 2019ರ ಏಪ್ರಿಲ್‌ ಅಂತ್ಯಕ್ಕೆ 1 ಕೋಟಿ ನೋಂದಣಿಯ ಗುರಿ ಹೊಂದಿದ್ದೇವೆ

–ದಿನೇಶ್‌ ತ್ಯಾಗಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಎಸ್‌ಸಿ ಇ–ಗವರ್ನೆನ್ಸ್‌ ಸರ್ವೀಸಸ್‌ ಇಂಡಿಯಾ ಲಿಮಿಟೆಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT