ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಆರಂಭವಾಗುತ್ತಲೇ ನಾಯಕರ ಮತ ಸಂದೇಶ

Last Updated 11 ಏಪ್ರಿಲ್ 2019, 4:24 IST
ಅಕ್ಷರ ಗಾತ್ರ

ನವದೆಹಲಿ: ದೇಶದ 17ನೇ ಲೋಕಸಭೆಗೆ ಇಂದು ರಾಷ್ಟ್ರದಲ್ಲಿ ಮೊದಲನೇ ಹಂತದ ಮತದಾನ ನಡೆಯುತ್ತಿದೆ. 20 ರಾಜ್ಯಗಳ 91 ಲೋಕಸಭೆ ಕ್ಷೇತ್ರಗಳು ಮತ್ತು ನಾಲ್ಕು ರಾಜ್ಯಗಳ ವಿಧಾನಸಭೆಗೆ ಇಂದು ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿಮತದಾರರು ಈ ಪ್ರಕ್ರಿಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಧಾನಿ ಮೋದಿ ಅವರೂ ಸೇರಿದಂತೆ ಹಲವು ಪ್ರಮುಖ ನಾಯಕರು ಮನವಿ ಮಾಡಿದ್ದಾರೆ.

ಮೊದಲ ಹಂತದಲ್ಲಿ ಮತದಾನ ಮಾಡುತ್ತಿರುವ ಕ್ಷೇತ್ರಗಳ ಮತದಾರರುಹೆಚ್ಚಿನ ಸಂಖ್ಯೆಯಲ್ಲಿ ಬಂದು ಹಕ್ಕು ಚಲಾಯಿಸಬೇಕು. ದಾಖಲೆಯ ಮತದಾನ ಮಾಡಬೇಕು. ಇದೇ ಮೊದಲ ಬಾರಿಗೆ ಮತ ಚಲಾವಣೆ ಮಾಡುತ್ತಿರುವ ಯುವ ಸಮುದಾಯವನ್ನುನಾನು ವಿಶೇಷವಾಗಿ ಕೋರುತ್ತೇನೆ.

-ನರೇಂದ್ರ ಮೋದಿ, ಪ್ರಧಾನಮಂತ್ರಿ

ಇದು ಅತಿ ಮಹತ್ವದ ದಿನ. 91 ಲೋಕಸಭೆ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಪ್ರಜಾಪ್ರಭುತ್ವ ದೊಡ್ಡ ಹಬ್ಬ ಎನಿಸಿಕೊಳ್ಳುವ ಮತದಾನ ಪ್ರಕ್ರಿಯೆಯಲ್ಲಿ ಜನತೆ ಪಾಲ್ಗೊಳ್ಳಬೇಕು ಎಂದು ನಾನು ಮನವಿ ಮಾಡುತ್ತೇನೆ. ‌

-ರಾಜನಾಥ್‌ ಸಿಂಗ್‌,ಕೇಂದ್ರ ಗೃಹ ಸಚಿವ

ಅರುಣಾಚಲಪ್ರದೇಶ, ಮನಿಪುರ, ಮೇಘಾಲಯ, ಮಿಜೋರಾಮ್‌, ನಾಗಾಲ್ಯಾಂಡ್‌, ಸಿಕ್ಕಿಂ ಮತ್ತು ತ್ರಿಪುರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಈಶಾನ್ಯ ಭಾರತದ ಅಭಿವೃದ್ಧಿಯ ವೇಗವನ್ನು ಹೀಗೇ ಕಾಪಾಡಬೇಕು ಎಂದು ನಾನು ಅಲ್ಲಿನ ಜನರಲ್ಲಿಮನವಿ ಮಾಡುತ್ತೇನೆ. ದೃಢ, ಭವಿಷ್ಯತ್ತಿನ ಕಲ್ಪನೆ ಇರುವ, ಪ್ರಾಮಾಣಿಕ ನಾಯಕತ್ವದಿಂದ ಮಾತ್ರ ಕಾಶ್ಮೀರದಿಂದ ಅಂಡಮಾನ್‌ ವರೆಗೆ ನಿಷ್ಪಕ್ಷಪಾತ ಅಭಿವೃದ್ಧಿ ಸಾಧ್ಯ. ಲಕ್ಷ ದ್ವೀಪ, ಅಂಡಮಾನ್‌ ಮತ್ತು ನಿಕೋಬಾರ್‌ ಜನರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂದು ನಾನು ಕೋರುತ್ತೇನೆ.

-ಅಮಿತ್‌ ಶಾ, ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ

‘ಸರ್ವಜನ ಹಿತಾಯ, ಸರ್ವಜನ ಸುಖಾಯ’ಕ್ಕಾಗಿ ಮತ್ತು ಪ್ರಮಾಣಿಕ ಸರ್ಕಾರ ರಚನೆಗಾಗಿ ನಿಮ್ಮ ಮತ ನೀಡಿ.

-ಮಾಯಾವತಿ, ಬಿಎಸ್‌ಪಿ ವರಿಷ್ಠರು

11 ತಾರೀಕಿನ ನಿಮ್ಮ ಮತ ಆಂಧ್ರ ಪ್ರದೇಶದ ಭವಿಷ್ಯವನ್ನು ನಿರ್ಧಾರ ಮಾಡಲಿದೆ. ನಾನು ನಿಮ್ಮ ಆಶೀರ್ವಾದ ಬಯಸುತ್ತೇನೆ. ಜನರೂ ಕೂಡ ಅದೇ ದೃಷ್ಟಿಯಲ್ಲೇ ಮತ ನೀಡಲಿದ್ದಾರೆ ಎಂದು ಭಾವಿಸಿದ್ದೇನೆ. ಉತ್ತಮ ನಾಳೆಗಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು.

-ಜಗನ್‌ ಮೋಹನ್‌ ರೆಡ್ಡಿ, ವೈಎಸ್‌ಆರ್‌ಸಿಪಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT