ರಾಜಕೀಯ ಪಕ್ಷಗಳ ಅರ್ಧದಷ್ಟು ದೇಣಿಗೆ ಮೂಲ ಅನಾಮಧೇಯ!

7
ಅಘೋಷಿತ ಮೂಲಗಳಿಂದ ದೇಣಿಗೆ

ರಾಜಕೀಯ ಪಕ್ಷಗಳ ಅರ್ಧದಷ್ಟು ದೇಣಿಗೆ ಮೂಲ ಅನಾಮಧೇಯ!

Published:
Updated:

ನವದೆಹಲಿ: 2017–18ನೇ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳು ಸಂಗ್ರಹಿಸಿದ ಶೇ 50ಕ್ಕಿಂತ ಹೆಚ್ಚಿನ ದೇಣಿಗೆಯ ಮೂಲ ಯಾವುದು ಎಂದು ಗೊತ್ತಿಲ್ಲ.

ಚುನಾವಣಾ ಕಣ್ಗಾವಲು ಸಂಸ್ಥೆ ಅಸೋಸಿಯೇಶನ್‌ ಫಾರ್‌ ಡೆಮಾಕ್ರೆಟಿಕ್ ರಿಫಾರ್ಮ್ಸ್‌ (ಎಡಿಆರ್‌) ಆರು ರಾಷ್ಟ್ರೀಯ ಪಕ್ಷಗಳ ಆದಾಯ ಮತ್ತು ದೇಣಿಗೆ ಮಾಹಿತಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಪ್ರತಿಪಕ್ಷಗಳಲ್ಲಿ ಹಣಬಲವಿದೆ ಅಂತಾರೆ ಮೋದಿ: ಆದ್ರೆ ಬಿಜೆಪಿ ಆದಾಯ ಎಷ್ಟು ಗೊತ್ತೇ?​

ಕಳೆದ ಸಾಲಿನಲ್ಲಿ ದೇಶದ ಆರು ರಾಷ್ಟ್ರೀಯ ಪಕ್ಷಗಳಿಗೆ ₹1293.05 ಕೋಟಿ ದೇಣಿಗೆ ಹರಿದು ಬಂದಿದ್ದು ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಅಂದರೆ, ₹689.44 ಕೋಟಿ ಅನಾಮಧೇಯ ಮೂಲಗಳಿಂದ ಹರಿದು ಬಂದಿದೆ.

ಅಘೋಷಿತ ಮೂಲಗಳಿಂದ ಬಿಜೆಪಿಯೊಂದಕ್ಕೆ ₹553.38 ಕೋಟಿ ಹಣ ಸಂದಾಯವಾಗಿದ್ದು, ರಾಜಕೀಯ ಪಕ್ಷಗಳ ಇಂತಹ ನಿಧಿಯಲ್ಲಿ ಬಿಜೆಪಿಯ ಪಾಲು ಶೇ 80ರಷ್ಟಿದೆ.

ಬಿಜೆಪಿ, ಕಾಂಗ್ರೆಸ್‌, ಸಿಪಿಐ, ಬಿಎಸ್‌ಪಿ, ಟಿಎಂಸಿ ಮತ್ತು ಎನ್‌ಸಿಪಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೇಣಿಗೆ ಮಾಹಿತಿ ಮತ್ತು ಆದಾಯ ತೆರಿಗೆ ಲೆಕ್ಕಪತ್ರ ವಿವರಗಳನ್ನು (ಐ.ಟಿ ರಿಟರ್ನ್ಸ್‌) ಆಧರಿಸಿ ಎಡಿಆರ್‌ ಈ ವಿಶ್ಲೇಷಣೆ ವರದಿ ತಯಾರಿಸಿದೆ. ಸಿಪಿಎಂ ಆದಾಯ ಮಾಹಿತಿ ಲಭ್ಯವಾಗಿಲ್ಲ ಎಂದು ಸಂಸ್ಥೆ ಹೇಳಿದೆ.

ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌, ನಗದು ಮತ್ತು ದೇಣಿಗೆ ರೂಪದಲ್ಲಿ ದೇಣಿಗೆ ಹರಿದು ಬಂದಿದೆ.

₹20 ಸಾವಿರಕ್ಕಿಂತ ಕಡಿಮೆ ಮೊತ್ತದ ದೇಣಿಗೆ ನೀಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳ  ಹೆಸರು ಮತ್ತು ಮಾಹಿತಿಯನ್ನು ರಾಜಕೀಯ ಪಕ್ಷಗಳು ಬಹಿರಂಗ ಪಡಿಸುವ ಆಗತ್ಯವಿಲ್ಲ. ಇಂತಹ ಮೂಲಗಳಿಂದ ಪಕ್ಷಗಳು ₹354.22 ಕೋಟಿ ಸಂಗ್ರಹಿಸಿವೆ. ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಸಲ್ಲಿಸುವ ದಾನಿಗಳಿಗೂ ಇದೇ ನಿಯಮ ಅನ್ವಯಿಸುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 1

  Frustrated
 • 6

  Angry

Comments:

0 comments

Write the first review for this !