ಗುರುವಾರ , ಡಿಸೆಂಬರ್ 12, 2019
26 °C

ಪೊಲೀಸರಿಗೆ ಇಂಗ್ಲಿಷ್‌ ಸಮಸ್ಯೆ: ಉದ್ಯಮಿಗೆ ಲಾಕಪ್‌ ಭಾಗ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ: ಕಾನೂನನ್ನು ಅನುಷ್ಠಾನಕ್ಕೆ ತರುವ ಪೊಲೀಸರಿಗೆ ನ್ಯಾಯಾಲಯದ ಉತ್ಕೃಷ್ಟ ಇಂಗ್ಲಿಷ್‌ ತಿಳಿಯದಿದ್ದರೆ ಏನಾಗುತ್ತದೆ ? ನಿರಪರಾಧಿಯೂ ಕಂಬಿ ಎಣಿಸಬೇಕಾಗುತ್ತದೆ ! 

ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡ ಬಿಹಾರ ಪೊಲೀಸರು, ಉದ್ಯಮಿಯೊಬ್ಬರಿಗೆ ಲಾಕಪ್‌ ‘ಭಾಗ್ಯ’ ಕರುಣಿಸಿದ್ದಾರೆ. 

ಜೆಹನಾಬಾದ್‌ನ ಉದ್ಯಮಿ ನೀರಜ್‌ಕುಮಾರ್‌ ಎಂಬುವರಿಗೆ ಪಟ್ನಾದ ಕೌಟುಂಬಿಕ ನ್ಯಾಯಾಲಯ ವಾರಂಟ್‌ ಹೊರಡಿಸಿತ್ತು. ಆದರೆ, ಅದು ಸಂಕಷ್ಟ ವಾರಂಟ್‌ ಆಗಿತ್ತು. ಆದರೆ, ಸಂಕಷ್ಟ ವಾರಂಟ್‌ (ಡಿಸ್ಟ್ರೆಸ್‌ ವಾರಂಟ್‌) ಎಂಬುದನ್ನು ಬಂಧನ ವಾರಂಟ್‌ (ಅರೆಸ್ಟ್‌ ವಾರಂಟ್‌) ಎಂದು ಓದಿಕೊಂಡ ಪೊಲೀಸರು, ನೀರಜ್‌ಕುಮಾರ್‌ ಅವರನ್ನು ಲಾಕಪ್‌ಗೆ ಹಾಕಿದ್ದಾರೆ. ಉದ್ಯಮಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಪೊಲೀಸರ ಈ ಎಡವಟ್ಟು ಬೆಳಕಿಗೆ ಬಂದಿದೆ. 

ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿರುವ ನೀರಜ್‌ಕುಮಾರ್‌ ಅವರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ವಿಚಾರಣೆ ಮುಕ್ತಾಯವಾಗುವವರೆಗೆ, ಪತ್ನಿಗೆ ಪ್ರತಿ ತಿಂಗಳಿಗೆ ₹2,500 ನಿರ್ವಹಣಾ ವೆಚ್ಚ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು.

ಆದರೆ, ಈ ಹಣವನ್ನು ನೀರಜ್‌ಕುಮಾರ್‌ ಸರಿಯಾಗಿ ನೀಡದ ಕಾರಣ, ಅವರಿಗೆ ನ್ಯಾಯಾಲಯ ಸಂಕಷ್ಟ ವಾರಂಟ್‌ ನೀಡಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು