ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಕುಟುಂಬವೇ ನಿಜವಾದ ದೇಶಪ್ರೇಮ: ಮೋದಿ

Last Updated 15 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ : ಜನಸಂಖ್ಯೆಯು ತೀವ್ರವಾಗಿ ಏರುತ್ತಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತ ಪಡಿಸಿದ್ದಾರೆ. ಮುಂದಿನ ತಲೆಮಾರುಗಳಿಗೆ ಇದು ಹತ್ತಾರು ಸವಾಲುಗಳನ್ನು ಒಡ್ಡಲಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಸಣ್ಣ ಕುಟುಂಬ ಹೊಂದುವುದು ದೇಶಭಕ್ತಿ. ಇದಕ್ಕಾಗಿ ಯಾರು ಗೌರವಕ್ಕೆ ಅರ್ಹರೋ ಅವರಿಗೆ ಸನ್ಮಾನ ಮಾಡಬೇಕಿದೆ ಎಂದೂ ಹೇಳಿದ್ದಾರೆ.

‘ಜನಸಂಖ್ಯಾ ಸ್ಫೋಟವು ಅನಿಯಂತ್ರಿತ ವೇಗ ಪಡೆದುಕೊಂಡಿದೆ. ಇದು ನಮಗೆ, ಮುಂದಿನ ತಲೆಮಾರುಗಳಿಗೆ ಅಪಾರ ಸವಾಲುಗಳನ್ನು ಒಡ್ಡಲಿದೆ’ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಜನಸಂಖ್ಯೆ ಏರಿಕೆ ಬಗ್ಗೆ ಬಿಜೆಪಿಯ ಹಲವು ಮುಖಂಡರು ಹಿಂದಿನಿಂದಲೂ ಕಳವಳ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ತರಬೇಕು ಎಂದೂ ಒತ್ತಾಯಿಸಿದ್ದಾರೆ. ಆದರೆ, ಮೋದಿ ಅವರು ಈ ವಿಚಾರದಲ್ಲಿ ಇದೇ ಮೊದಲ ಬಾರಿ ಮಾತನಾಡಿದ್ದಾರೆ.

ಜನರು ಸುಶಿಕ್ಷಿತರು ಮತ್ತು ಆರೋಗ್ಯವಂತರಾಗಿದ್ದರೆ ದೇಶ ಕೂಡ ಸುಶಿಕ್ಷಿತ ಮತ್ತು ಆರೋಗ್ಯಯುತವಾಗಿ ಇರುತ್ತದೆ ಎಂದು ಅವರು ಪ್ರತಿಪಾದಿಸಿದರು.

ರಾಜಕೀಯ ಲಾಭ ನಷ್ಟ ಗಮನದಲ್ಲಿ ಇರಿಸಿಕೊಂಡು ನಿರ್ಧರಿಸಿದರೆ ಅದು ಮುಂದಿನ ತಲೆಮಾರುಗಳಿಗೆ ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಜನಸಂಖ್ಯೆ ಏರಿಕೆ ನಿಯಂತ್ರಣದ ವಿರೋಧಿಗಳನ್ನು ಪರೋಕ್ಷವಾಗಿ ಮೋದಿ ಟೀಕಿಸಿದರು.

****

ಸಂಪತ್ತು ಸೃಷ್ಟಿಸುವವರನ್ನು ಶಂಕೆಯಿಂದ ನೋಡುವುದು ಬೇಡ. ಭಾರತದ ಸಮೃದ್ಧಿಗಾಗಿ ಸಂಪತ್ತು ಸೃಷ್ಟಿಸುವವರನ್ನು ನಾವು ಗೌರವಿಸಬೇಕು.

-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT