ಸೋಮವಾರ, ಜೂಲೈ 6, 2020
27 °C

ಹಂದ್ವಾರ ದಾಳಿಗೆ ಪ್ರತಿಯಾಗಿ ಮತ್ತೆ ನಿರ್ದಿಷ್ಟ ದಾಳಿ ನಡೆಸಿ: ಶಿವಸೇನಾ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ‘ಕಾಶ್ಮೀರದ ಹಂದ್ವಾರದಲ್ಲಿ ಭಾನುವಾರ ಸೇನೆಯ ಐವರು ಸಿಬ್ಬಂದಿಯನ್ನು ಕಳೆದುಕೊಂಡಿದ್ದಕ್ಕೆ ಪ್ರತಿಯಾಗಿ ಭಾರತ ನಿರ್ದಿಷ್ಟ ದಾಳಿ ನಡೆಸಬೇಕು. ಆದರೆ ಆ ಕುರಿತು ಪ್ರಚಾರ ಮಾಡಬಾರದು’ ಎಂದು ಶಿವಸೇನಾ ಮಂಗಳವಾರ ಹೇಳಿದೆ.

‘ಕೋವಿಡ್-19‌ರಿಂದ ಉಂಟಾಗಿರುವ ಸ್ಥಿತಿಯಿಂದಾಗಿ, ‘ಕಾಶ್ಮೀರ ಯುದ್ಧ’ದ ಕುರಿತು ದೇಶ ಮರೆತುಹೋಗಿದೆ. ಆದರೆ ಪಾಕಿಸ್ತಾನ ಇದನ್ನು ಮರೆತಿಲ್ಲ’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಹೇಳಲಾಗಿದೆ.

ಯಾವುದೇ ಪಕ್ಷದ ಹೆಸರು ಉಲ್ಲೇಖಿಸದ ಶಿವಸೇನಾ, ‘ಹಂದ್ವಾರದಲ್ಲಿ ಹುತಾತ್ಮರಾದವರ ಕುಟುಂಬದವರ ಮೇಲೂ ಯಾರಾದರೂ ಹೂಮಳೆ ಸುರಿಸಬೇಕು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಲ್ಲಿ ಒಬ್ಬ ಮುಸ್ಲಿಂ ಸಹ ಸೇರಿದ್ದರು. ಹಿಂದು-ಮುಸ್ಲಿಂ ರಾಜಕೀಯ ಮಾಡುತ್ತಿರುವವರು ಇದನ್ನು ಮರೆಯಬಾರದು’ ಎಂದು ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು