ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಸ್ಟರ್‌ ರಚನಾ ಸ್ಪರ್ಧೆ

Last Updated 8 ಜುಲೈ 2019, 20:00 IST
ಅಕ್ಷರ ಗಾತ್ರ

ಚೆನ್ನೈ: ಅಮೆರಿಕದ ‘ಅಪೊಲೊ 11’ ಉಪಗ್ರಹವು ಚಂದ್ರನ ಮೇಲೆ ಇಳಿದ 50ನೇ ವರ್ಷಾಚರಣೆ ಹಾಗೂ ಭಾರತದ ಎರಡನೇ ಚಂದ್ರಯಾನದ ಅಂಗವಾಗಿ ಇಲ್ಲಿನ ಅಮೆರಿಕ ಕಾನ್ಸುಲೇಟ್‌ ಜನರಲ್‌ ಎಲ್ಲಾ ವಯೋಮಾನದವರಿಗಾಗಿ ಪೋಸ್ಟರ್‌ ಸ್ಪರ್ಧೆಯನ್ನು ಏರ್ಪಡಿಸಿದೆ.

ಬಾಹ್ಯಾಕಾಶ ವಿಚಾರದಲ್ಲಿ ಆಸಕ್ತಿ ಹೊಂದಿರುವ ತಮಿಳುನಾಡು, ಕರ್ನಾಟಕ, ಕೇರಳ, ಪುದುಚೇರಿ ಹಾಗೂ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದ ನಿವಾಸಿಗಳು, ‘ಅಮೆರಿಕ–ಭಾರತ ಬಾಹ್ಯಾಕಾಶ ಅನ್ವೇಷಣೆ’ ವಿಷಯವಾಗಿ ಆಕರ್ಷಕ ಪೋಸ್ಟರ್‌ ರಚಿಸಿ ಇ–ಮೇಲ್ ಮೂಲಕ amcongenchennaicontest@gmail.com ಗೆ ಕಳುಹಿಸಬಹುದು. ಮೇಲ್‌ನ ಸಬ್ಜೆಕ್ಟ್‌ ಎಂಬಲ್ಲಿ ‘Poster Contest 2019’ ಎಂದು ನಮೂದಿಸಬೇಕು. ಪ್ರವೇಶ ಕಳುಹಿಸಲು ಜುಲೈ 31 ಕೊನೆಯ ದಿನ.

ಚೆನ್ನೈನ ಅಮೆರಿಕ ಕಾನ್ಸುಲೇಟ್‌ ಜನರಲ್‌ನ ಪ್ರತಿನಿಧಿಗಳನ್ನೂ ಒಳಗೊಂಡ ಸಮಿತಿಯು ಸ್ಪರ್ಧಾ ವಿಜೇತರನ್ನು ಆಯ್ಕೆ ಮಾಡಲಿದೆ. ಸ್ವಂತಿಕೆ, ಕಲಾತ್ಮಕತೆ ಮತ್ತು ಬಾಹ್ಯಾಕಾಶ ಪ್ರವಾಸದ ಕಾಲ್ಪನಿಕ ಚಿತ್ರಣವನ್ನು ಪರಿಗಣಿಸಿ ವಿಜೇತರ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅತ್ಯುತ್ತಮ ಪೋಸ್ಟರ್‌ಅನ್ನು ಚೆನ್ನೈನ ಅಮೆರಿಕನ್‌ ಸೆಂಟರ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು.

ಅಮೆರಿಕ– ಭಾರತ ಬಾಹ್ಯಾಕಾಶ ಅನ್ವೇಷಣೆಯ ವಿಚಾರವಾಗಿ ಜುಲೈ ತಿಂಗಳಲ್ಲಿ ಉಪನ್ಯಾಸ, ಚಿತ್ರ ಪ್ರದರ್ಶನ ಮುಂತಾದ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ವಿವರಗಳಿಗೆ ಸಂಸ್ಥೆಯ ಅಧಿಕೃತ ಫೇಸ್‌ಬುಕ್‌ ಪುಟ www.facebook.com/chennai.usconsulate ಸಂಪರ್ಕಿಸಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT