ಸೋಮವಾರ, ಡಿಸೆಂಬರ್ 16, 2019
26 °C

ಕೇರಳ: ಮಗು ಮಣ್ಣು ತಿನ್ನುತ್ತಿರಲಿಲ್ಲ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ: ‘ಹಸಿವನ್ನು ತಣಿಸುವ ಸಲುವಾಗಿ ಏಳು ವರ್ಷದ ಮಗುವೊಂದು ಮಣ್ಣು ತಿನ್ನುತ್ತಿತ್ತು’ ಎಂಬ ವರದಿಯನ್ನು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಅಲ್ಲಗಳೆದಿದೆ.

‘ಮಗು ಮಣ್ಣನ್ನು ತಿನ್ನುತ್ತಿರಲಿಲ್ಲ; ಬದಲಿಗೆ ಮಣ್ಣಿನಲ್ಲಿ ಆಟವಾಡುತ್ತಿತ್ತು’ ಎಂದು ಆಯೋಗದ ಅಧ್ಯಕ್ಷ ಪಿ.ಸುರೇಶ್‌ ಬುಧವಾರ ಹೇಳಿದ್ದಾರೆ. ಮಗುವಿನ ತಾಯಿ, ಬಂಧುಗಳು ಹಾಗೂ ನೆರೆಹೊರೆಯವರ ಹೇಳಿಕೆಗಳನ್ನೂ ಅವರು ಸಂಗ್ರಹಿಸಿದ್ದಾರೆ.

‘ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ಈ ವಿಷಯವನ್ನು ತಪ್ಪಾಗಿ ಅರ್ಥೈಸಿದೆ’ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಮದ್ಯ ವ್ಯಸನಿ ಅಪ್ಪ, ನಿತ್ರಾಣಗೊಂಡ ತಾಯಿ: ಹಸಿವು ನೀಗಿಸಲು ಮಣ್ಣು ಸೇವಿಸಿದ ಮಕ್ಕಳು

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಸ್‌.ಪಿ. ದೀಪಕ್‌, ‘ಮಹಿಳೆ ಮತ್ತು ಮಕ್ಕಳ ದುಸ್ಥಿತಿ ಬಗ್ಗೆ ಕರೆ ಬಂದ ನಂತರ ಸ್ಥಳಕ್ಕೆಭೇಟಿ ನೀಡಿದ್ದ ಮಂಡಳಿ ಅಧಿಕಾರಿಗಳು, ಮಕ್ಕಳು ಕರುಣಾಜನಕ ಸ್ಥಿತಿಯಲ್ಲಿರುವುದನ್ನು ಕಂಡಿದ್ದಾರೆ. ಈ ಕುಟುಂಬಕ್ಕೆ ಸಮಾಜ ಕಲ್ಯಾಣ ಯೋಜನೆಗಳಡಿ ಯಾವಸೌಲಭ್ಯವೂ ಸಿಗದ ಬಗ್ಗೆ ಖಾತರಿಪಡಿಸಿಕೊಂಡಿದ್ದಾರೆ’ ಎಂದು ಹೇಳುವ ಮೂಲಕ ಮಂಡಳಿಯ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು