ಮಹಾರಾಷ್ಟ್ರದ ಎಲ್ಲ ಕಡೆ ಸ್ಪರ್ಧೆ ಪ್ರಕಾಶ್ ಅಂಬೇಡ್ಕರ್

ಭಾನುವಾರ, ಮಾರ್ಚ್ 24, 2019
27 °C
12 prakash ambedkaer

ಮಹಾರಾಷ್ಟ್ರದ ಎಲ್ಲ ಕಡೆ ಸ್ಪರ್ಧೆ ಪ್ರಕಾಶ್ ಅಂಬೇಡ್ಕರ್

Published:
Updated:
Prajavani

ಮುಂಬೈ: ಮಹಾರಾಷ್ಟ್ರದ ಎಲ್ಲ 48 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುವುದಾಗಿ ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಅವರು ಮಂಗಳವಾರ ಘೋಷಿಸಿದ್ದಾರೆ. ಬಿಜೆಪಿ ವಿರೋಧಿ ಮೈತ್ರಿಕೂಟ ರಚಿಸಲು ಮುಂದಾಗಿರುವ ಕಾಂಗ್ರೆಸ್ ಹಾಗೂ ಎನ್‌ಸಿಪಿಗೆ ಪ್ರಕಾಶ್ ಅಂಬೇಡ್ಕರ್ ಅವರ ಈ ನಡೆ ಮುಳುವಾಗುವ ಸಾಧ್ಯತೆಯಿದೆ. 

ಮೈತ್ರಿಕೂಟ ಸೇರುವ ಸಂಬಂಧ ಕಾಂಗ್ರೆಸ್ ಜೊತೆ ಮತ್ತೆ ಚರ್ಚೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ವಂಚಿತ ಬಹುಜನ ಆಘಾಡಿ’ ವೇದಿಕೆಯು ಈಗಾಗಲೇ 22 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದು, ಉಳಿದವರ ಹೆಸರನ್ನು ಸದ್ಯದಲ್ಲೇ ಪ್ರಕಟಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಕಾಶ್ ಅಂಬೇಡ್ಕರ್ ಅವರು ಮಾಜಿ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ವಿರುದ್ಧ ಸೊಲ್ಲಾಪುರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಬಿಜೆಪಿಯ ಶರದ್ ಬನ್ಸೋಡೆ ಅವರು 2014ರ ಚುನಾವಣೆಯಲ್ಲಿ ಶಿಂಧೆಯನ್ನು ಪರಾಭವಗೊಳಿಸಿದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !