ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ ವಿಷಯದಲ್ಲಿ ಪಿಣರಾಯಿ ಆತುರದ ನಿರ್ಧಾರ ಕೈಗೊಂಡರು: ಪ್ರಕಾಶ್ ರೈ

Last Updated 14 ಜನವರಿ 2019, 14:56 IST
ಅಕ್ಷರ ಗಾತ್ರ

ಕೋಯಿಕ್ಕೋಡ್: ಶಬರಿಮಲೆ ವಿಷಯದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆತುರದ ನಿರ್ಧಾರ ಕೈಗೊಂಡರು ಎಂದು ಸಿನಿಮಾ ನಟ ಪ್ರಕಾಶ್ ರೈ ಹೇಳಿದ್ದಾರೆ.

ಮನೋರಮಾ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ ರೈ, ಶಬರಿಮಲೆ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಬಂದಾಗ ಅಲ್ಲಿನ ಪರಿಸ್ಥಿತಿಯನ್ನು ಅರಿತು ಆ ತೀರ್ಪನ್ನು ಪಿಣರಾಯಿ ಅನುಷ್ಠಾನ ಮಾಡಬೇಕಿತ್ತು. ಶಬರಿಮಲೆ ವಿಷಯವನ್ನು ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಬಳಸಿಕೊಂಡವು.ಈ ವಿಷಯದ ಎಲ್ಲ ಆಯಾಮಗಳನ್ನು ಪರಿಶೀಲಿಸಿದ ನಂತರವೇ ಮಹಿಳೆಯರಿಗೆ ಶಬರಿಮಲೆ ಪ್ರವೇಶ ತೀರ್ಪು ಅನುಷ್ಠಾನ ಮಾಡಬೇಕಾಗಿತ್ತು ಎಂದಿದ್ದಾರೆ.

ತಮಿಳುನಾಡಿನಲ್ಲಿ ಸ್ಟಾರ್ ರಾಜಕೀಯ ಮುಗಿದಿದೆ.ಕಮಲ್ ಹಾಸನ್ ಮತ್ತು ರಜನೀಕಾಂತ್ ಅವರ ಅಭಿಮಾನಿಗಳ ಗುಂಪು ವೋಟ್ ಆಗಿ ಬದಲಾಗಲ್ಲ.ಸಾಮಾಜಿಕ ಸಮಸ್ಯೆಗಳ ಬಗ್ಗೆ, ಜನರ ಪರವಾಗಿ ಮಾತನಾಡಬೇಕು. ರಾಜಕೀಯದ ಬಗ್ಗೆ ಅರಿವು ಬೇಕು. ನಟ ಆಗಿರುವುದರಿಂದ ವೋಟ್ ಲಭಿಸುತ್ತದೆ ಎಂಬ ಕಾಲ ಹೋಯಿತು ಎಂದಿದ್ದಾರೆ ಪ್ರಕಾಶ್ ರೈ.

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ರೈ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT