‘ಮೋದಿ ಚಹಾ ಮಾರಿದರು ಎಂಬುದು ಗಿಮಿಕ್‌’

7

‘ಮೋದಿ ಚಹಾ ಮಾರಿದರು ಎಂಬುದು ಗಿಮಿಕ್‌’

Published:
Updated:
Prajavani

ಆಗ್ರಾ: ‘ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನನಗೆ 43 ವರ್ಷಗಳ ಗೆಳೆತನವಿತ್ತು. ಅವರು ಚಹಾ ಮಾರುವುದನ್ನು ನಾನು ಯಾವತ್ತೂ ನೋಡಿಲ್ಲ. ಜನರ ಅನುಕಂಪ ಗಿಟ್ಟಿಸುವುದಕ್ಕಾಗಿ ಅವರು ಗಿಮಿಕ್ ಮಾಡಿದ್ದಾರೆ’ ಎಂದು ವಿಶ್ವ ಹಿಂದೂ ಪರಿಷತ್‌ನ ಮಾಜಿ ಮುಖಂಡ ಪ್ರವೀಣ್ ತೊಗಾಡಿಯಾ ಹೇಳಿರುವುದಾಗಿ ‘ಇಂಡಿಯಾ ಟುಡೇ’ ವರದಿ ಮಾಡಿದೆ.

ಹೊಸ ಪಕ್ಷ: ಅಂತರರಾಷ್ಟ್ರೀಯ ಹಿಂದೂ ಪರಿಷತ್‌ ಮುಖ್ಯಸ್ಥರೂ ಆಗಿರುವ ತೊಗಾಡಿಯಾ, ಫೆಬ್ರುವರಿ 9ರಂದು ತಮ್ಮ ಹೊಸ ಪಕ್ಷವನ್ನು ಘೋಷಿಸುವುದಾಗಿ ಪ್ರಕಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !