ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಲಕ್ಷಣ ಇಲ್ಲದ ಗರ್ಭಿಣಿಯರ ಪರೀಕ್ಷೆಗೆ ಐಸಿಎಂಆರ್‌ ಸಲಹೆ

Last Updated 22 ಏಪ್ರಿಲ್ 2020, 12:35 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಲಕ್ಷಣಗಳನ್ನು ಹೊಂದಿರದ, ಮುಂದಿನ ಐದು ದಿನಗಳಲ್ಲಿ ಹೆರಿಗೆ ಆಗಲಿರುವ ಎಲ್ಲ ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಸಲಹೆ ನೀಡಿದೆ.

ಹಾಟ್‌ಸ್ಪಾಟ್‌ ಜಿಲ್ಲೆಗಳಲ್ಲಿರುವ ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿರುವ ಗರ್ಭಿಣಿಯರಿಗೆ ಅನ್ವಯವಾಗುವಂತೆ ಐಸಿಎಂಆರ್‌ ಈ ಸಲಹೆಯನ್ನು ನೀಡಿದ್ದು, ಸೌಲಭ್ಯಗಳು ಇಲ್ಲ ಎಂಬ ಕಾರಣ ನೀಡಿ ಗರ್ಭಿಣಿಯರನ್ನು ಬೇರೆ ಆಸ್ಪತ್ರೆಗೆ ಕಳುಹಿಸಬಾರದು ಎಂದೂ ಹೇಳಿದೆ.

ಹೃದಯಕ್ಕೆ ಸಂಬಂಧಿಸಿದ ತೊಂದರೆ ಇರುವ ಗರ್ಭಿಣಿಯರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಐಸಿಎಂಆರ್‌ ಈ ಮೊದಲೇ ಎಲ್ಲ ಆಸ್ಪತ್ರೆಗಳಿಗೆ ತಿಳಿಸಿತ್ತು.

ಆಸ್ಪತ್ರೆಗೆ ದಾಖಲಾಗುವ ಕೋವಿಡ್‌–19 ಹೊಂದಿ ಗರ್ಭಿಣಿಯರು ಹಾಗೂ ಹೆರಿಗೆ ನಂತರ ನವಜಾತ ಶಿಶುಗಳ ಕುರಿತ ವಿವರಗಳನ್ನು ಕಡ್ಡಾಯವಾಗಿ ದಾಖಲಿಸುವಂತೆಯೂ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT