ಇರಾನ್‌ನಿಂದ ತೈಲ: ಭಾರತಕ್ಕೆ ಅಮೆರಿಕ ಎಚ್ಚರಿಕೆ

7

ಇರಾನ್‌ನಿಂದ ತೈಲ: ಭಾರತಕ್ಕೆ ಅಮೆರಿಕ ಎಚ್ಚರಿಕೆ

Published:
Updated:

ವಾಷಿಂಗ್ಟನ್: ಇರಾನ್‌ನಿಂದ ತೈಲ ಆಮದನ್ನು ನವೆಂಬರ್‌ 4ರೊಳಗೆ ಸಂಪೂರ್ಣವಾಗಿ ನಿಲ್ಲಿಸಬೇಕು. ಇಲ್ಲದಿದ್ದರೆ ನಿರ್ಬಂಧ ಎದುರಿಸಬೇಕಾದೀತು ಎಂದು ಭಾರತ ಮತ್ತು ಇತರ ದೇಶಗಳಿಗೆ ಅಮೆರಿಕ ಎಚ್ಚರಿಕೆ ನೀಡಿದೆ. ಯಾವುದೇ ದೇಶಕ್ಕೂ ನಿರ್ಬಂಧದಿಂದ ವಿನಾಯಿತಿ ಇಲ್ಲ ಎಂಬುದನ್ನು ಅಮೆರಿಕ ಈ ಮೂಲಕ ಸ್ಪಷ್ಟಪಡಿಸಿದೆ. 

2015ರಲ್ಲಿ ಇರಾನ್‌ ಜತೆಗೆ ಮಾಡಿಕೊಂಡಿದ್ದ ನಾಗರಿಕ ಪರಮಾಣು ಒಪ್ಪಂದವನ್ನು ಮೇಯಲ್ಲಿ ರದ್ದುಪಡಿಸಲಾಗಿದೆ. ಇರಾನ್‌ನ ತೈಲ ಕ್ಷೇತ್ರದ ಮೇಲೆ ನವೆಂಬರ್‌ನಲ್ಲಿ ನಿರ್ಬಂಧ ಹೇರಲಾಗುವುದು ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ತೈಲ ರಫ್ತು ಇರಾನ್‌ ಸರ್ಕಾರದ ಅತ್ಯಂತ ದೊಡ್ಡ ಆದಾಯ ಮೂಲವಾಗಿದೆ. ಹಾಗಾಗಿ ಇರಾನ್‌ನ ತೈಲ ರಫ್ತನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅಮೆರಿಕದ ಉದ್ದೇಶ. 

‘ಇರಾನ್‌ ಮೇಲಿನ ನಿರ್ಬಂಧ ಜಾರಿಗೆ ಸಹಕರಿಸದ ದೇಶಗಳ ವಿರುದ್ಧ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿದ್ದೇವೆ. ನಿರ್ಬಂಧ ಅನುಷ್ಠಾನಕ್ಕೆ ನೆರವಾಗುವಂತೆ ಮಿತ್ರರು ಮತ್ತು ಪಾಲುದಾರ ದೇಶಗಳ ಮನವೊಲಿಸಲಾಗುವುದು’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಸಹಾಯಕ ಸಚಿವೆ ಮನೀಶಾ ಸಿಂಗ್‌ ಹೇಳಿದ್ದಾರೆ. 

ಹಣಕಾಸು ಮತ್ತು ವಿದೇಶಾಂಗ ಇಲಾಖೆಯ ತಂಡವೊಂದು ವಿವಿಧ ದೇಶಗಳಿಗೆ ಹೋಗಿ ಅಮೆರಿಕದ ಕಾರ್ಯತಂತ್ರದ ಬಗ್ಗೆ ಮಾಹಿತಿ ನೀಡಲಿದೆ. ಈಗಾಗಲೇ 30 ದೇಶಗಳಿಗೆ ತಂಡವು ಭೇಟಿ ಕೊಟ್ಟಿದೆ ಎಂದು ತಿಳಿಸಿದರು. 

**

* ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಸುವ ಮೂರನೇ ದೇಶ ಇರಾನ್‌

* ಇರಾಕ್‌, ಸೌದಿ ಅರೇಬಿಯಾ ಮೊದಲ ಎರಡು ಸ್ಥಾನಗಳಲ್ಲಿವೆ

* ಚೀನಾ, ಜಪಾನ್‌, ದಕ್ಷಿಣ ಕೊರಿಯಾ, ಯುರೋಪ್‌ನ ದೇಶಗಳಿಗೂ ಇರಾನ್‌ನಿಂದ ತೈಲ ಪೂರೈಸಲಾಗುತ್ತಿದೆ

 

ಬರಹ ಇಷ್ಟವಾಯಿತೆ?

 • 20

  Happy
 • 4

  Amused
 • 3

  Sad
 • 0

  Frustrated
 • 23

  Angry

Comments:

0 comments

Write the first review for this !