ಭಾನುವಾರ, ಮಾರ್ಚ್ 7, 2021
32 °C

ತೆಲಂಗಾಣ ವಿದಾನಸಭೆ ವಿಸರ್ಜನೆಗೆ ಚುನಾವಣಾ ಆಯೋಗ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ನಿರೀಕ್ಷೆಯಂತೆಯೇ, ತೆಲಂಗಾಣ ವಿಧಾನಸಭೆಯನ್ನು ಅವಧಿಗೆ ಮುನ್ನವೇ ವಿಸರ್ಜಿಸಿರುವುದಕ್ಕೆ ಚುನಾವಣಾ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ. 

ಇನ್ನು 8 ತಿಂಗಳ ಕಾಲಾವಧಿ ಇರುವಂತೆಯೇ ಕೆ. ಚಂದ್ರಶೇಖರ ರಾವ್‌ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. 

’ಕೆ.ಚಂದ್ರಶೇಖರ್ ಅವರ ನಡೆ ವಿವೇಚನಾರಹಿತವಾದುದು, ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಚುನಾವಣೆ ನಡೆಸುವುದನ್ನು ವಿಳಂಬ ಮಾಡದೇ ಸಕಾಲಕ್ಕೆ ನಡೆಸಬೇಕಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒಂ ಪ್ರಕಾಶ್‌ ರಾವತ್  ಶುಕ್ರವಾರ ಸಂಜೆ ಎನ್‌ಡಿಟಿವಿಗೆ ಪ್ರತಿಕ್ರಿಯಿಸಿದ್ದಾರೆ. 

2019 ಜೂನ್ ಅಂತ್ಯಕ್ಕೆ ತೆಲಂಗಾಣ ವಿಧಾನಸಭೆ ಕೊನೆಗೊಳ್ಳಲಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ ಮತ್ತು ಮಿಜೋರಾಂ ಜತೆಗೆ ರಾಜ್ಯಕ್ಕೂ ಚುನಾವಣೆ ನಡೆಯಲಿ ಎಂಬ ಕಾರಣಕ್ಕೆ ವಿಧಾನಸಭೆಯನ್ನು ವಿಸರ್ಜಿಸಲಾಗಿದೆ. ವಿಧಾನಸಭೆಯ 119 ಕ್ಷೇತ್ರಗಳ ಪೈಕಿ 105 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಮೂಲಕ ಕೆ. ಚಂದ್ರಶೇಖರ ರಾವ್‌ ಚುನಾವಣಾ ಕಹಳೆ ಮೊಳಗಿಸಿದ್ದಾರೆ.

ಚುನಾವಣೆಗೆ ಸಿದ್ಧರಿದ್ದೇವೆ; ಬಿಜೆಪಿ

ತೆಲಂಗಾಣದಲ್ಲಿ ಅವಧಿಗಿಂತ ಮುಂಚಿತವಾಗಿ ನಡೆಯುವ ಚುನಾವಣೆಗೆ ಸಿದ್ಧರಿದ್ದೇವೆ. ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎನ್ನುವ ಭರವಸೆಯೂ ನಮಗಿದೆ. ತೆಲಂಗಾಣ ರಾಜಕೀಯದಲ್ಲಿ ಬಿಜೆಪಿ ಮಹತ್ವದ ಸ್ಥಾನ ಪಡೆಯಲಿದೆ ಎಂದು ಬಿಜೆಪಿ ನಾಯಕ ಎನ್‌. ರಾಮಚಂದ್ರ ರಾವ್‌ ತಿಳಿಸಿದರು.

‘ಟಿಡಿಪಿಗೆ ಸರಿಯಾದ ನಾಯಕತ್ವವಿಲ್ಲ. ಇತರೆ ಪಕ್ಷಗಳ ಒಂದೆರಡು ಶಾಸಕರನ್ನು ಹೊರತು ಪಡಿಸಿ ಎಲ್ಲಾ ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಒಂದು ವೇಳೆ ಕಾಂಗ್ರೆಸ್‌–ಟಿಡಿಪಿ ಮೈತ್ರಿ ಮಾಡಿಕೊಂಡರೆ ಅದು ಹಾಲಿಗೆ ಮೊಸರು ಬೆರೆಸಿದಂತಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ

ವಿಧಾನಸಭೆ ಅವಧಿಗೆ ಮುನ್ನವೇ ವಿಸರ್ಜನೆ: ತೆಲಂಗಾಣ ಚುನಾವಣೆಗೆ ಸಜ್ಜು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು