ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಅಸ್ಸಾಂನಲ್ಲಿ ಶಾಲೆ, ರಾಷ್ಟ್ರೀಯ ಉದ್ಯಾನ, ಸಿನಿಮಾ ಥಿಯೇಟರ್ ಬಂದ್ 

Last Updated 16 ಮಾರ್ಚ್ 2020, 4:23 IST
ಅಕ್ಷರ ಗಾತ್ರ

ಗುವಾಹಟಿ: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 29ರವರೆಗೆ ಎಲ್ಲ ಶಾಲೆ- ಕಾಲೇಜು, ಜಿಮ್, ಈಜು ಕೊಳ ಮತ್ತು ಸಿನಿಮಾ ಥಿಯೇಟರ್‌ಗಳನ್ನು ಮುಚ್ಚಲು ಅಸ್ಸಾಂ ಸರ್ಕಾರ ಆದೇಶಿಸಿದೆ. ಮಂಗಳವಾರದಿಂದ ಎಲ್ಲ ರಾಷ್ಟ್ರೀಯ ಉದ್ಯಾನ, ಹುಲಿ ರಕ್ಷಿತಾರಣ್ಯಗಳನ್ನು ಬಂದ್ ಮಾಡಲಾಗುವುದು.

ವನ್ಯಜೀವಿ ಸಂರಕ್ಷಿತ ಪ್ರದೇಶಗಳಲ್ಲಿ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಸಂರಕ್ಷಿತ ಅರಣ್ಯ ಪ್ರದೇಶದ (ವನ್ಯಜೀವಿ)ಹೆಚ್ಚುವರಿ ಮುಖ್ಯಸ್ಥ ಎಂ.ಕೆ ಯಾದವ್ ಹೇಳಿದ್ದಾರೆ.

ಕಾಜಿರಂಗಾ ಮತ್ತು ಮಾನಸ್ ರಾಷ್ಟ್ರೀಯ ಉದ್ಯಾನ ಸೇರಿದಂತೆ ಅಸ್ಸಾಂನಲ್ಲಿ 5 ರಾಷ್ಟ್ರೀಯ ಉದ್ಯಾನಗಳು ಮತ್ತು 18 ವನ್ಯಜೀವಿ ಸಂರಕ್ಷಿತ ಅರಣ್ಯಗಳು ಇವೆ. ಅಕ್ಟೋಬರ್‌ನಿಂದ ಏಪ್ರಿಲ್ ತಿಂಗಳ ಮಧ್ಯೆ ಇಲ್ಲಿ ಭೇಟಿ ನೀಡುವ ಪ್ರವಾಸಿಗಳ ಸಂಖ್ಯೆಯೂ ಜಾಸ್ತಿ ಇದೆ.

ಅರಣ್ಯದಲ್ಲಿ ಶೂಟಿಂಗ್ ಮತ್ತು ಅಧ್ಯಯನಕ್ಕೂ ಮಾರ್ಚ್ 29ರವರೆಗೆ ನಿರ್ಬಂಧ ಹೇರಲಾಗಿದೆ.ಕೋವಿಡ್ -19 ಸೋಂಕು ತಗಲದಂತೆ ಮುಂಜಾಗ್ರತಾ ಕ್ರಮವಾಗಿ ಶಾಲೆ, ಕಾಲೇಜು, ಈಜು ಕೊಳ ಜಿಮ್, ಸಿನಿಮಾ ಹಾಲ್‌ಗಳು ಮಾರ್ಚ್ 29ರ ವರೆಗೆ ಮುಚ್ಚಲಿವೆ.

ಸಿಬಿಎಸ್‌ಇ ಮತ್ತು ರಾಜ್ಯ ಪರೀಕ್ಷಾ ಮಂಡಳಿಯ ಪರೀಕ್ಷೆಗಳನ್ನು ಹೊರತು ಪಡಿಸಿ ಇನ್ನುಳಿದ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಇಲ್ಲಿಯವರಿಗೆ 1075 ಮಂದಿಯನ್ನು ತಪಾಸಣೆಗೊಳಪಡಿಸಿದ್ದು 253 ಮಂದಿ ಮೇಲೆ ನಿಗಾ ಇರಿಸಲಾಗಿದೆ . ಸೋಂಕು ಶಂಕಿತ 11 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT