ಬಿಪಿನ್‌ ರಾವತ್‌ಗೆ ಪರಮ ವಿಶಿಷ್ಟ ಸೇವಾ ಪದಕ

ಸೋಮವಾರ, ಮಾರ್ಚ್ 18, 2019
31 °C
15 ಯೋಧರಿಗೆ ಶೌರ್ಯ ಚಕ್ರ, ಮೂವರು ಹುತಾತ್ಮ ಯೋಧರಿಗೆ ಕೀರ್ತಿ ಚಕ್ರ ಪ್ರದಾನ

ಬಿಪಿನ್‌ ರಾವತ್‌ಗೆ ಪರಮ ವಿಶಿಷ್ಟ ಸೇವಾ ಪದಕ

Published:
Updated:
Prajavani

‌ನವದೆಹಲಿ: ಸೇನಾ ಪಡೆಯ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ ಸೇರಿದಂತೆ ಶಸಸ್ತ್ರ ಪಡೆಯ 15 ಯೋಧರಿಗೆ ಶೌರ್ಯ ಚಕ್ರ ಹಾಗೂ ಮೂವರು ಹುತಾತ್ಮ ಯೋಧರಿಗೆ ಕೀರ್ತಿ ಚಕ್ರ ಪದಕಗಳನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಗುರುವಾರ ಪ್ರದಾನ ಮಾಡಿದರು.

ರಜಪೂತ್‌ ರೆಜಿಮೆಂಟ್‌ನ ಸಿಪಾಯ್‌ ವ್ರಮ್ಹಾ ಪಾಲ್ ಸಿಂಗ್ ಮತ್ತು ಸಿಆರ್‌ಪಿಎಫ್‌ನ ಕಾನ್‌ಸ್ಟೆಬಲ್‌ ರಾಜೇಂದ್ರ ಕುಮಾರ್‌ ನೈನ್‌ ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರ ಪದಕ, ರವೀಂದ್ರ ಧನವಾಡೆ ಅವರಿಗೂ ಮರಣೋತ್ತರವಾಗಿ ಶೌರ್ಯಚಕ್ರ ಪದಕ
ವನ್ನು ಶಸಸ್ತ್ರ ಪಡೆಗಳ ಮಹಾದಂಡನಾಯಕರೂ ಆದ ಕೋವಿಂದ್‌ ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು.

ಹುತಾತ್ಮ ಯೋಧರ ಕುಟುಂಬದ ಸದಸ್ಯರು ಪದಕ ಸ್ವೀಕರಿಸಿದರು. ಈ ಮೂವರು ಯೋಧರು ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದರು.

ಪರಮ ವಿಶಿಷ್ಟ ಸೇವಾ ಪದಕ ಪುರಸ್ಕೃತರು: ಸೇನೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಪರಮ ವಿಶಿಷ್ಟ ಸೇವಾ ಪದಕಗಳನ್ನು ಸೇನೆಯ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ಸೇನೆಯ ಈಶಾನ್ಯ ಕಮಾಂಡ್‌ ಮುಖ್ಯಸ್ಥ ಲೆಫ್ಟಿನಂಟ್‌ ಜನರಲ್‌ ಮನೋಜ್‌ ನರವಾಣೆ, ಶಸಸ್ತ್ರ ಪಡೆಯ ಮೆಡಿಕಲ್‌ ಕಾರ್ಪ್ಸ್‌ ಮುಖ್ಯಸ್ಥ ಲೆಫ್ಟಿನಂಟ್‌ ಜನರಲ್‌ ಬಿಪಿನ್‌ ಪುರಿ, ವೆಸ್ಟ್ರನ್‌ ಏರ್‌ ಕಮಾಂಡ್‌ನ ಕಮಾಂಡಿಂಗ್‌ ಇನ್‌ ಚೀಫ್‌ ಏರ್‌ ಮಾರ್ಷಲ್‌ ರಘುನಂದನ್‌ ನಂಬಿಯಾರ್‌ ಸೇರಿದಂತೆ 14 ಹಿರಿಯ ಅಧಿಕಾರಿಗಳು ಸ್ವೀಕರಿಸಿದರು.

ಲೆಫ್ಟಿನಂಟ್‌ ಜನರಲ್‌ ಸರನ್‌ಜೀತ್‌ ಸಿಂಗ್‌ ಅವರಿಗೆ ಉತ್ತಮ ಯುದ್ಧ ಸೇವಾ ಪದಕ ಮತ್ತು ಮೂರು ಸಶಸ್ತ್ರ ಸೇನಾ ಪಡೆಗಳ 25 ಉನ್ನತ ಅಧಿಕಾರಿಗಳಿಗೆ ಅತಿ ವಿಶಿಷ್ಟ ಸೇವಾ ಪದಕ ನೀಡಲಾಯಿತು.

ಯುದ್ಧ, ಸಂಘರ್ಷದ ಸಮಯದಲ್ಲಿ ಅತ್ಯಂತ ಅಸಾಧಾರಣ ಸೇವೆ ಸಲ್ಲಿಸಿದ ಸೇನಾ ಅಧಿಕಾರಿಗಳಿಗೆ ಉತ್ತಮ ಯುದ್ಧ ಸೇವಾ ಪದಕ ಮತ್ತು ಅಸಾಧಾರಣ ಸೇವೆ ಸಲ್ಲಿಸಿದ್ದ ಶಸಸ್ತ್ರ ಪಡೆಯ ಯೋಧರಿಗೆ ಅತಿ ವಿಶಿಷ್ಟ ಪದಕ ನೀಡಲಾಗುತ್ತದೆ. ಶತ್ರುವಿನ ಎದುರು ಅಸಾಧಾರಣ ಧೈರ್ಯ ತೋರಿದ ಯೋಧರಿಗೆ ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರ ಪದಕಗಳನ್ನು ನೀಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !