ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿಷಸ್‌ ಪ್ರಧಾನಿ ತವರು ಉತ್ತರ ಪ್ರದೇಶದಲ್ಲಿ ಸಂಭ್ರಮ

Last Updated 14 ನವೆಂಬರ್ 2019, 23:28 IST
ಅಕ್ಷರ ಗಾತ್ರ

ಬಲಿಯಾ, ಉತ್ತರ ಪ್ರದೇಶ: ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜುಗ್ನಾಥ್‌ ಅವರ ಪೂರ್ವಿಕರು ಬಲಿಯಾ ಜಿಲ್ಲೆಯ ರಾಸ್ರಾಪಟ್ಟಣದವರಾಗಿದ್ದು, ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಕಳೆದ ವಾರವಷ್ಟೇ ಮಾರಿಷಸ್‌ ಸಂಸತ್‌ಗೆ ಚುನಾವಣೆ ನಡೆದಿದ್ದು, ಪ್ರವಿಂದ್‌ ಜುಗ್ನಾಥ್‌ ಅವರ ‘ಎಂಒಎಂ’ ಪಕ್ಷ ಬಹುಮತ ಪಡೆದಿದೆ.ಪ್ರಧಾನಿಯಾಗಿ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ವಿನಿಮಯವಾಗಿದೆ.

ರಾಸ್ರಾದ ಉಪ ವಿಭಾಗಾಧಿಕಾರಿ ವಿಪಿನ್‌ ಕುಮಾರ್‌ ಜೈನ್‌ ಅವರು, ‘ಜುಗ್ನಾಥ್‌ ಅವರ ಪೂರ್ವಿಕರು ಇದೇ ಪ್ರದೇಶದವರಾಗಿದ್ದರು ಎಂಬುದಕ್ಕೆ ಖಚಿತ ದಾಖಲೆಗಳಿದ್ದು, ಅವರ ಗ್ರಾಮವನ್ನು ಇನ್ನಷ್ಟೇ ಗುರುತಿಸಬೇಕಿದೆ’ ಎಂದು ಹೇಳಿದ್ದಾರೆ.

‘ಇಲ್ಲಿನ ನಾಲ್ವರು, ಜುಗ್ನಾಥ್‌ ಅವರು ತಮ್ಮ ಕುಟುಂಬಕ್ಕೆ ಸೇರಿದವರು ಎಂದು ಮುಂದೆ ಬಂದಿದ್ದಾರೆ. ಆದರೆ, ಇನ್ನೂ ದೃಢಪಟ್ಟಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT