ಪ್ರಧಾನಿ ಕಾರ್ಯಕ್ರಮ: ಕಪ್ಪು ದಿರಿಸಿಗೆ ನಿರ್ಬಂಧ

7

ಪ್ರಧಾನಿ ಕಾರ್ಯಕ್ರಮ: ಕಪ್ಪು ದಿರಿಸಿಗೆ ನಿರ್ಬಂಧ

Published:
Updated:

ಮೇದಿನಿನಗರ, ಜಾರ್ಖಂಡ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಪ್ಪುಪಟ್ಟಿ ಪ್ರದರ್ಶಿಸುವ ಸಾಧ್ಯತೆಯಿದ್ದು, ಕಪ್ಪುಬಟ್ಟೆ ಧರಿಸದಂತೆ ಕಾರ್ಯಕ್ರಮಕ್ಕೆ ಬರುವವರ ಮೇಲೆ ನಿರ್ಬಂಧ ವಿಧಿಸಲಾಗಿದೆ. 

ಶನಿವಾರ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮಕ್ಕೆ  ಕಪ್ಪುಬಣ್ಣವಿರುವ ಎಲ್ಲ ವಸ್ತುಗಳು ಹಾಗೂ ಬಟ್ಟೆಗಳಿಗೆ ನಿರ್ಬಂಧ ವಿಧಿಸಿ ಪಲಮು ಜಿಲ್ಲಾಡಳಿತ ಆದೇಶಿಸಿದೆ. 

ಸೇವೆ ಕಾಯಮಾತಿಗೆ ಆಗ್ರಹಿಸಿ ಮೂರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಶಿಕ್ಷಕರು ಪ್ರಧಾನಿ ಅವರ ವಿರುದ್ಧ ಕಪ್ಪುಬಟ್ಟೆ ಪ್ರದರ್ಶಿಸುವ ಸಾಧ್ಯತೆಯಿರುವ ಕಾರಣ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. 

ಜನರು ಕಪ್ಪುವಸ್ತುಗಳನ್ನು ತರದಂತೆ ತಡೆಯಿರಿ ಎಂದು ಪಕ್ಕದ ಚತರಾ, ಲತೇಹಾರ್ ಮತ್ತು ಗಡವಾ ಜಿಲ್ಲೆಗಳಿಗೆ ಸೂಚಿಸಲಾಗಿದೆ ಎಂದು ಪಲಮು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !