4

ಕೈದಿಯನ್ನು ಕಿರು ಪ್ರವಾಸಕ್ಕೆ ಕರೆದೊಯ್ದ ಜೈಲು ಸಿಬ್ಬಂದಿ!

Published:
Updated:

ಜೈಪುರ: ಅಲ್ವಾರ್ ಕೇಂದ್ರ ಕಾರಾಗೃಹದಿಂದ ಸಿಬ್ಬಂದಿಯೇ ಆರೋಪಿಯನ್ನು ಕಿರು ಪ್ರವಾಸಕ್ಕೆ ಕರೆದೊಯ್ದ ವಿಡಿಯೊ ದೃಶ್ಯಗಳು ಬಹಿರಂಗವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಂತರರಾಜ್ಯ ಬಹುಕೋಟಿ ಹಗರಣದ ಆರೋಪಿ ದಿಲೀಪ್ ವರ್ಮಾ, ಕಪ್ಪು ಬ್ಯಾಗೊಂದನ್ನು ಹಿಡಿದುಕೊಂಡು ರಾತ್ರಿ ವೇಳೆ ಜೈಲಿನಿಂದ ಹೊರ ಹೋಗುತ್ತಿರುವುದು ಮತ್ತು ಅದಕ್ಕೆ ಜೈಲು ಸಿಬ್ಬಂದಿಯೇ ಬೆಂಗಾವಲಾಗಿರುವ ದೃಶ್ಯ ವಿಡಿಯೊದಲ್ಲಿದೆ.

‘ವರ್ಮಾ ಜೈಲು ಸಿಬ್ಬಂದಿಯನ್ನು ಸಂಪೂರ್ಣವಾಗಿ ನಿರ್ವಹಣೆ ಮಾಡುತ್ತಿದ್ದರು ಎಂಬುದು ಈ ವಿಡಿಯೊದಿಂದ ಗೊತ್ತಾಗುತ್ತಿದೆ. ವರ್ಮಾ ಮತ್ತು ಜೈಲು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆಗಾಗಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪ್ರಕಾಶ್‌ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಗೋರಖ್‌ಪುರ ನಿವಾಸಿಯಾದ ವರ್ಮಾ, ತಮ್ಮ ಕಂಪನಿಯ ಮೂಲಕ ಹಲವರನ್ನು ವಂಚಿಸಿದ್ದ ಆರೋಪದ ಮೇಲೆ ಜೈಪುರ ಪೊಲೀಸರು 2015ರಲ್ಲಿ ಬಂಧಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !