ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ಕಾಲೇಜುಗಳಲ್ಲಿ ಖಾಸಗಿ ವೈದ್ಯರಿಗೂ ಬೋಧನೆಗೆ ಅವಕಾಶ

ಕೇಂದ್ರ ಸರ್ಕಾರದಿಂದ ಸುತ್ತೋಲೆ
Last Updated 30 ಡಿಸೆಂಬರ್ 2019, 20:58 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯಕೀಯ ಕಾಲೇಜುಗಳು ಇನ್ನು ಮುಂದೆ ಖಾಸಗಿ ವೈದ್ಯರನ್ನು ಅರೆಕಾಲಿಕ ಆಧಾರದ ಮೇಲೆ ನೇಮಕ ಮಾಡಿಕೊಂಡು ಎಂಬಿಬಿಎಸ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಿಸಲು ನಿಯೋಜಿಸಬಹುದು. ಅನಿವಾಸಿ ಭಾರತೀಯರಿಗೂ ಬೋಧನೆಗೆ ಅವಕಾಶ ನೀಡಬಹುದು ಎಂದು ಸರ್ಕಾರದ ಸುತ್ತೋಲೆ ತಿಳಿಸಿದೆ.

ಈ ಹೊಸ ನಿಯಮ ಏಮ್ಸ್‌ ಸಂಸ್ಥೆಗಳು, ಪಿಜಿಐ ಚಂಡೀಗಡ ಮತ್ತು ಪುದುಚೇರಿಯಲ್ಲಿನ ಜವಾಹರಲಾಲ್‌ ನೆಹರು ಸ್ನಾತಕೋತ್ತರ ಮತ್ತು ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆಗೆ ಅನ್ವಯವಾಗುವುದಿಲ್ಲ.

ಈ ನಿರ್ಧಾರವನ್ನು ಬೋರ್ಡ್‌ ಆಫ್ ಡೈರೆಕ್ಟರ್ಸ್‌ (ಬಿಒಜಿ) ಕೈಗೊಂಡಿದೆ. ವೈದ್ಯಕೀಯ ಶಿಕ್ಷಣ ನಿಯಂತ್ರಿಸುವ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅಧಿಕಾರವನ್ನು ಬಿಒಜಿಗೆ ನೀಡಲಾಗಿದೆ. ಖಾಸಗಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಬೋಧಕ ಸಿಬ್ಬಂದಿ ಕೊರತೆ ಸಮಸ್ಯೆ ನಿವಾರಣೆ ಬಗ್ಗೆ ಬಿಒಜಿ ನೋಡಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT