ರೈಲ್ವೆ ಸೇವೆಗಳನ್ನು ಖಾಸಗಿ ಕಂಪನಿಗಳಿಗೆ ವಹಿಸಲು ಚಿಂತನೆ

7

ರೈಲ್ವೆ ಸೇವೆಗಳನ್ನು ಖಾಸಗಿ ಕಂಪನಿಗಳಿಗೆ ವಹಿಸಲು ಚಿಂತನೆ

Published:
Updated:

ನವದೆಹಲಿ: ಖಾಸಗೀಕರಣಕ್ಕೆ ಭಾರತೀಯ ರೈಲ್ವೆ ಮುಂದಾಗಿದ್ದು ರೈಲು ಸೇವೆ, ಪ್ರಯಾಣ ದರ ನಿರ್ಣಯ ಮೊದಲಾದವುಗಳನ್ನು ಖಾಸಗಿ ಕಂಪನಿಗಳಿಗೆ ವಹಿಸುವುದರ ಬಗ್ಗೆ ಚಿಂತನೆ ನಡೆಸಿದೆ.

ಪ್ಯಾಸೆಂಜರ್ ರೈಲು ಸೇವೆ ಮತ್ತು ಅದರ ಪ್ರಯಾಣ ದರ ನಿರ್ಣಯಿಸುವ ಕಾರ್ಯವನ್ನು ಖಾಸಗಿ ಕಂಪನಿಗಳಿಗೆ ನೀಡುವುದರ ಬಗ್ಗೆ  ತಜ್ಞರ ಜತೆ ಸಮಾಲೋಚನೆ ನಡೆದು ಬರುತ್ತಿದೆ ಎಂದು ರೈಲ್ವೆ ಮಂಡಳಿ ಸದಸ್ಯರೊಬ್ಬರು ಹೇಳಿದ್ದಾರೆ.

ಸೆಂಟರ್ ಫಾರ್ ಟ್ರಾನ್ಸ್​ಪೋರ್ಟೇಷನ್ ರಿಸರ್ಚ್ ಮ್ಯಾನೇಜ್‍ಮೆಂಟ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ರೈಲ್ವೆ ಮಂಡಳಿ ಸದಸ್ಯ ಗಿರೀಶ್ ಪಿಳ್ಳೆ ಈ ವಿಷಯವನ್ನು ಹೇಳಿದ್ದಾರೆ.  ಜಗತ್ತಿನಾದ್ಯಂತ ರೈಲ್ವೆ ಸೇವೆಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಬಂದಿವೆ. ಭಾರತದಲ್ಲಿಯೂ ಇಂಥಾ ಬದಲಾವಣೆಗಳಿಗೆ ಸಮಯ ಸನ್ನಿಹಿತವಾಗಿದೆ.

ಪ್ರಯಾಣ ದರ ತೀರ್ಮಾನಿಸುವುದಕ್ಕೆ  ಅಧಿಕಾರ ನೀಡುವುದು ಮತ್ತು ಟರ್ಮಿನಲ್ ನಿರ್ಮಾಣದ ಉಸ್ತುವಾರಿಯನ್ನು ಖಾಸಗಿ ಕಂಪನಿಗಳಿಗೆ ನೀಡುವುದರ ಬಗ್ಗೆ ಮಾತುಕತೆ ನಡೆಯುತ್ತಿದೆ. ಅದೇ ವೇಳೆ ಗೂಡ್ಸ್ ರೈಲು ಸೇವೆ ಮತ್ತು  ಪ್ಯಾಸೆಂಜರ್ ರೈಲು ಸೇವಾ ವಲಯವನ್ನು ವಿಂಗಡಿಸಬೇಕಾದ ಅಗತ್ಯವಿದೆ ಎಂದು ಪಿಳ್ಳೈ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !