ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮೃದ್ಧಿ’ಯ ಹಾದಿ ನೋಟ

Last Updated 30 ಅಕ್ಟೋಬರ್ 2018, 20:21 IST
ಅಕ್ಷರ ಗಾತ್ರ

ಪರಿಶಿಷ್ಟ ಜಾತಿ, ಪಂಗಡದ ನಿರುದ್ಯೋಗಿಗಳಿಗೆ ಉದ್ಯಮಶೀಲತೆಗೆ ನೆರವಾಗುವ ‘ಸಮೃದ್ಧಿ’ ಯೋಜನೆಯನ್ನು ನ. 7ರಿಂದ ಆರಂಭಿಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳವಾರ ಪ್ರಕಟಿಸಿದರು. ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ತರಬೇತಿ, ಉದ್ಯಮ ಘಟಕ ಸ್ಥಾಪನೆ, ಈ ಮೂಲಕ ಸ್ವಾವಲಂಬನೆಗೆ ದಾರಿ ಮಾಡಿಕೊಡಲು ಈ ಯೋಜನೆ ನೆರವಾಗುತ್ತದೆ. ದೇಶದಲ್ಲಿ ಮೊದಲ ಬಾರಿಗೆ ಜಾರಿಯಾಗುತ್ತಿರುವ ಈ ಯೋಜನೆಯ ಪಕ್ಷಿ ನೋಟ ಹೀಗಿದೆ.

₹ 800 ಕೋಟಿ

ಒಟ್ಟು ಯೋಜನಾ ವೆಚ್ಚ

10,600

ಫಲಾನುಭವಿಗಳ ಗುರಿ

62

ಖಾಸಗಿ ಕಂಪನಿಗಳೊಂದಿಗೆ ತರಬೇತಿ, ಘಟಕ ಸ್ಥಾಪನೆ ಸಂಬಂಧಿತ ಒಪ್ಪಂದ

30

ಕಂಪನಿಗಳಿಂದ ಒಪ್ಪಂದಕ್ಕೆ ಸಹಿ

₹ 10 ಲಕ್ಷದವರೆಗೆ

ಮರುಪಾವತಿಸಲಾಗದ ಮೂಲಬಂಡವಾಳ ನೆರೆವು

ಅರ್ಹತೆ: ಎಸ್ಸೆಸ್ಸೆಲ್ಸಿ ತೇರ್ಗಡೆ, 21 ವರ್ಷ ಮೀರಿರಬೇಕು

ಶೇ 10ರಷ್ಟು ತರಬೇತಿ ವೆಚ್ಚ ಕಂಪನಿಗಳೇ ಭರಿಸಬೇಕು

ಗುರಿ ಯಾರು?

ಗ್ರಾಮೀಣ ಮತ್ತು ಅರೆನಗರ ಪ್ರದೇಶದ ನಿರುದ್ಯೋಗಿಗಳು

ಪ್ರಮುಖ ಕಂಪನಿಗಳು

ಕೆಎಂಎಫ್‌, ಬಾಟ, ಪಾರಗಾನ್‌, ಬಿಗ್‌ ಬಾಸ್ಕೆಟ್‌, ಓಲಾ, ಮೇರು ಕ್ಯಾಬ್‌, ಜಿಇ ಹೆಲ್ತ್‌ಕೇರ್‌, ನೀಲಗಿರೀಸ್‌, ಸ್ವಿಗ್ಗಿ, ಐಟಿಸಿ...

ಏನು ಲಾಭ?

* ನಿರುದ್ಯೋಗಿಗಳಿಗೆ ಸ್ವಾವಲಂಬನೆಯ ದಾರಿ

* ಖಾಸಗಿ ಕಂಪನಿಗಳಿಗೆ ವಹಿವಾಟು ವಿಸ್ತರಣೆಯ ಅವಕಾಶ

* ಇಲ್ಲಿಫಲಾನುಭವಿಗೆ ಹಣ ಸಿಗುವುದಿಲ್ಲ. ಆಯಾ ಘಟಕದ ವೆಚ್ಚ ಸಂಬಂಧಿಸಿದ ಮೂಲಗಳಿಗೆ (ಉದಾ: ವಾಹನ ತೆಗೆದುಕೊಳ್ಳುವುದಾದರೆ ಆಯಾ ಕಂಪನಿ, ಅಂಗಡಿ, ಹಾಲಿನ ಬೂತ್‌ ಸ್ಥಾಪಿಸುವುದಾದರೆ ಅದಕ್ಕೆ ಬೇಕಾದ ಪರಿಕರ ಪೂರೈಸುವವರು...) ಸ್ಥಾಪನೆಗಷ್ಟೇ ನೇರ ಹಣ ಪಾವತಿಸಲಾಗುತ್ತದೆ. ಯೋಜನೆ ಕಾರ್ಯಗತವಾಗುವಂತೆ ತೀವ್ರ ನಿಗಾ ವಹಿಸಲಾಗುತ್ತದೆ.

*ನ. 7ರಿಂದ ಅರ್ಜಿ ಸಲ್ಲಿಕೆ

*ಡಿಸೆಂಬರ್‌ ಅಂತ್ಯದವರೆಗೆ ಅರ್ಹರ ಆಯ್ಕೆ

*ಆಯಾ ಕ್ಷೇತ್ರದ ಕಂಪನಿಗಳಲ್ಲಿ ತರಬೇತಿ

*ಕನಿಷ್ಠ ಮೂರು ದಿನದಿಂದ 30 ದಿನಗಳವರೆಗೆ ತರಬೇತಿ ಅವಧಿ

*ತರಬೇತಿ ಹೊಂದಿದ ಬಗ್ಗೆ ಪ್ರಮಾಣೀಕರಣ

*ಫ್ರಾಂಚೈಸಿ/ ಘಟಕ ಸ್ಥಾಪನೆ ಪ್ರಕ್ರಿಯೆ

*ಉದ್ಯಮ/ ವಹಿವಾಟು ಆರಂಭ

ಪರಿಶಿಷ್ಟರು ಉದ್ಯಮಿಗಳಾಗಲು ಸರ್ಕಾರದ ವತಿಯಿಂದ ಇದೊಂದು ಪ್ರಯತ್ನ. ಸಾಕಷ್ಟು ಮುಂದಾಲೋಚನೆ ಮಾಡಿಯೇ ಜಾರಿಗೊಳಿಸುತ್ತಿದ್ದೇವೆ. ಇದರ ಯಶಸ್ಸು ಅಥವಾ ವಿಫಲತೆ ಅನುಷ್ಠಾನದ ಬಳಿಕ ತಿಳಿಯಲಿದೆ.

-ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಇಲಾಖೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT