ಪ್ರಿಯಾಂಕಾ ಚೋಪ್ರಾ–ನಿಕ್‌ ನಿಶ್ಚಿತಾರ್ಥ

7
ಬಾಲಿವುಡ್‌– ಹಾಲಿವುಡ್‌ ಸಮ್ಮಿಲನ

ಪ್ರಿಯಾಂಕಾ ಚೋಪ್ರಾ–ನಿಕ್‌ ನಿಶ್ಚಿತಾರ್ಥ

Published:
Updated:
Deccan Herald

ಮುಂಬೈ: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಹಾಲಿವುಡ್‌ ಗಾಯಕ ನಿಕ್‌ ಜೋನಸ್‌ ಅವರ ನಿಶ್ಚಿತಾರ್ಥವನ್ನು ಶನಿವಾರ ಘೋಷಣೆ ಮಾಡಲಾಯಿತು. ಇದಕ್ಕೂ ಮೊದಲು ಚೋಪ್ರಾ ಅವರ ಜುಹು ನಿವಾಸದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.

ಅಬು ಜಾನಿ ಸಂದೀಪ್‌ ಖೋಸ್ಲಾ ಅವರು ವಿನ್ಯಾಸಗೊಳಿಸಿದ ಸಲ್ವಾರ್‌ ಅನ್ನು ಪ್ರಿಯಾಂಕ ಧರಿಸಿದ್ದರೆ ಐವರಿ ಕುರ್ತಾ ಚೂಡಿದಾರ್‌ ಅನ್ನು ನಿಕ್‌ ಧರಿಸಿ ಕಂಗೊಳಿಸಿದರು.

ನಿಶ್ಚಿತಾರ್ಥ ಸಂಬಂಧಿಸಿದ ಕಾರ್ಯಕ್ರಮದ ಸಿದ್ಧತೆಗಳನ್ನು ಬೆಳಿಗ್ಗೆಯಿಂದಲೇ ಮಾಡಲಾಗಿತ್ತು. ನಿಕ್‌ ತಮ್ಮ ತಂದೆ– ತಾಯಿ ಜತೆ ಗುರುವಾರವೇ ಬಂದಿದ್ದರು. ಇವರನ್ನು ಪ್ರಿಯಾಂಕಾ ಅವರು ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು. ಇದೇ ಮೊದಲ ಬಾರಿಗೆ ಪ್ರಿಯಾಂಕಾ ಮತ್ತು ನಿಕ್‌ ಪೋಷಕರು ಪರಸ್ಪರ ಭೇಟಿಯಾಗಿದ್ದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !