ಈ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಳ್ಳಲಿದೆ: ಪ್ರಿಯಾಂಕಾ ಗಾಂಧಿ ವಾದ್ರಾ

ಭಾನುವಾರ, ಮೇ 26, 2019
28 °C

ಈ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಳ್ಳಲಿದೆ: ಪ್ರಿಯಾಂಕಾ ಗಾಂಧಿ ವಾದ್ರಾ

Published:
Updated:

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಜನರಲ್ಲಿ ಸಿಟ್ಟು ಮತ್ತು ಬೇಗುದಿ ಇದೆ. ಇದನ್ನು ಅವರು ಮೋದಿ ವಿರುದ್ಧ ಮತ ಚಲಾಯಿಸಿ ವ್ಯಕ್ತ ಪಡಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ದೆಹಲಿಯ ಲೋಧಿ ಎಸ್ಟೇಟ್‍ನಲ್ಲಿರುವ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿರುವ ಮತಗಟ್ಟೆಯಲ್ಲಿ ಪ್ರಿಯಾಂಕಾ ಭಾನುವಾರ ಮತ ಚಲಾಯಿಸಿದ್ದಾರೆ.

ಜನರು ಸಿಟ್ಟುಗೊಂಡಿದ್ದಾರೆ. ಅವರ ಮನಸ್ಸಿನಲ್ಲಿ ವ್ಯಥೆ ಇದೆ. ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡುವುದರ ಬದಲು ಮೋದಿಯವರು ಬೇರೇನೋ ಮಾತನಾಡುತ್ತಿದ್ದಾರೆ. ಇದೀಗ ಜನರು ಮೋದಿ ವಿರುದ್ಧ ಮತ ಚಲಾಯಿಸಿ ತಮ್ಮ ಸಿಟ್ಟನ್ನು ವ್ಯಕ್ತ ಪಡಿಸಲಿದ್ದಾರೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕಾ ಹೇಳಿದ್ದಾರೆ, 

ಪ್ರಿಯಾಂಕಾ ತಮ್ಮ ಪತಿ ರಾಬರ್ಟ್ ವಾದ್ರಾ ಜತೆ ಮತದಾನ ಮಾಡಲು ಬಂದಿದ್ದರು.
 

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 0

  Sad
 • 0

  Frustrated
 • 10

  Angry

Comments:

0 comments

Write the first review for this !