ಭಾನುವಾರ, ಸೆಪ್ಟೆಂಬರ್ 22, 2019
22 °C
ವಿಡಿಯೊ ವೈರಲ್‌

ಬೆಂಬಲಿಗರ ಭೇಟಿ ಮಾಡಲು ಬ್ಯಾರಿಕೇಡ್ ದಾಟಿದ ಪ್ರಿಯಾಂಕಾ ಗಾಂಧಿ 

Published:
Updated:

ಭೋಪಾಲ್: ಮಧ್ಯಪ್ರದೇಶದಲ್ಲಿ ಆಯೋಜಿಸಿದ್ದ ರ್ಯಾಲಿ ಸಂದರ್ಭದಲ್ಲಿ ಬೆಂಬಲಿಗರನ್ನು ಭೇಟಿ ಮಾಡುವ ಸಲುವಾಗಿ ಕಾಂಗ್ರೆಸ್‌ ರಾಷ್ಟ್ರೀಯ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಬ್ಯಾರಿಕೇಡ್‌ ಅನ್ನು ದಾಟಿದ ವಿಡಿಯೊ ವೈರಲ್‌ ಆಗಿದೆ.

ಇಲ್ಲಿನ ರತ್ಲಂ ನಲ್ಲಿರುವ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಅವರು ಪಕ್ಷದ ಅಭ್ಯರ್ಥಿ ಕಾಂತಿಲಾಲ್‌ ಭುರಿಯಾ ಪರವಾಗಿ ಮತಯಾಚಿಸಿದರು. ಕಾರ್ಯಕ್ರಮ ಮುಗಿಸಿ ತೆರಳುವ ಸಂದರ್ಭ ‘ಪ್ರಿಯಾಂಕ ದೀದಿ’ ಕೂಗು ಜೋರಾಯಿತು. ಇದರಿಂದ ಪುಳಕಿತಗೊಂಡ ಪ್ರಿಯಾಂಕ ಅಡ್ಡಲಾಗಿ ಹಾಕಲಾಗಿದ್ದ ಮರದ ಅಡೆತಡೆಯನ್ನು ದಾಟಿ ಬೆಂಬಲಿಗರತ್ತ ತೆರಳಿದರು.

ಭಾರಿ ಬಿಗಿಭದ್ರತೆ ಹೊಂದಿರುವ ಸೆಲೆಬ್ರಿಟಿ ನಾಯಕರಲ್ಲಿ ಪ್ರಿಯಾಂಕ ಅವರೂ ಒಬ್ಬರಾಗಿದ್ದು, ಪ್ರಿಯಾಂಕ ಅಡೆತಡೆ ದಾಟುವ ಸಂದರ್ಭ ಅಂಗರಕ್ಷಕರು ಪ್ರಯಾಸಪಟ್ಟರು.

ಈ ಹಿಂದೆ ಪ್ರಿಯಾಂಕ ಅಜ್ಜಿ ಇಂದಿರಾ ಗಾಂಧಿ ಅವರೂ ಬೆಂಬಲಿಗರನ್ನು ಭೇಟಿ ಮಾಡುವ ಸಲುವಾಗಿ ಅಡೆತಡೆಯನ್ನು ದಾಟಿದ್ದರು. ಹೀಗಾಗಿ ಪ್ರಿಯಾಂಕ ಅವರನ್ನು ಇಂದಿರಾಗೆ ಹೋಲಿಸಲಾಯಿತು.

ಪ್ರಿಯಾಂಕ ಅವರು 2009ರಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ಕೊನೆಯ ಸಲ ಇಲ್ಲಿಗೆ ಬಂದಿದ್ದರು. ಪ್ರಿಯಾಂಕ ಅಜ್ಜಿ ಇಂದಿರಾ ಗಾಂಧಿ ಹಾಗೂ ಮುತ್ತಾತ ನೆಹರೂ ಅವರೂ ಈ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದರು.

Post Comments (+)