ಭಾನುವಾರ, ಜನವರಿ 26, 2020
20 °C

ಪೌರತ್ವ ಕಾಯ್ದೆ| ವಿದ್ಯಾರ್ಥಿಗಳ ಮೇಲಿನ ಹಲ್ಲೆ ಬಗ್ಗೆ ಮೋದಿ ಮಾತನಾಡಲಿ: ಪ್ರಿಯಾಂಕಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ನಡೆಸುತ್ತಿದ್ದ ಜಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧದ ಪೊಲೀಸರ ಕ್ರಮ ಖಂಡಿಸಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಸಾಂಕೇತಿಕ ಧರಣಿ ಆರಂಭಿಸಿದ್ದಾರೆ.

ದೆಹಲಿಯ ಇಂಡಿಯಾ ಗೇಟ್‌ ಬಳಿ ಸೋಮವಾರ ಮಧ್ಯಾಹ್ನ ಧರಣಿ ಕುಳಿತ ಪ್ರಿಯಾಂಕ ಅವರಿಗೆ ಕಾಂಗ್ರೆಸ್‌ ಹಿರಿಯ ನಾಯಕರೂ ಜೊತೆಯಾಗಿದ್ದಾರೆ. ಎರಡು ಗಂಟೆಗಳ ಕಾಲ ಈ ಸಾಂಕೇತಿಕ ಹೋರಾಟ ನಡೆಸಲು ನಿರ್ಧರಿಸಿಲಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಜಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿಗಳು ಕಳೆದ ಕೆಲ ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಭಾನುವಾರ ಅವರ ಹೋರಾಟ ಹಿಂಸಾಚಾರಕ್ಕೆ ತಿರುಗಿತ್ತು. ಆದರೆ, ಈ ಹಿಂಸಾಚಾರವನ್ನು ವಿಶ್ವವಿದ್ಯಾಲಯ ನಿರಾಕರಿಸಿದೆ. ಈ ಮಧ್ಯೆ ದೆಹಲಿ ಪೊಲೀಸರು ವಿವಿ ಆವರಣಕ್ಕೆ ತೆರಳಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವಿಚಾರವು ದೇಶದಾದ್ಯಂತ ಪ್ರತಿಭಟನೆಯ ಕಿಚ್ಚು ಹೊತ್ತಿಸಿದೆ.

ಧರಣಿ ಕುಳಿತಿರುವ ಪ್ರಿಯಾಂಕಾ ಅವರೊಂದಿಗೆ ಪಕ್ಷದ 300ಕ್ಕೂ ಹೆಚ್ಚು ನಾಯಕರು, ಕಾರ್ಯಕರ್ತರೂ ಇದ್ದಾರೆ.  ಪ್ರಿಯಾಂಕಾ ಹೋರಾಟಕ್ಕೆ ಜೊತೆಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದು ಸೇರುವ ಮುನ್ಸೂಚನೆ ಇರುವುದರಿಂದ ಸಮೀಪದ ಮೆಟ್ರೋ ನಿಲ್ದಾಣವನ್ನು ಪೊಲೀಸರು ಬಂದ್‌ ಮಾಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು