ಶುಕ್ರವಾರ, ನವೆಂಬರ್ 22, 2019
27 °C

ನಿರ್ಮಲಾ ಹೇಳಿದ ಓಲಾ, ಐನ್‌ಸ್ಟೀನ್‌ ಗುರುತ್ವ ಎಂದ ಪೀಯೂಷ್‌ಗೆ ಪ್ರಿಯಾಂಕಾ ಗುದ್ದು

Published:
Updated:

ನವದೆಹಲಿ: ದೇಶದ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರಿಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಟ್ವಿಟರ್‌ನಲ್ಲಿ ಕಾಲೆಳೆದಿದ್ದಾರೆ.

‘ಸರಿಯಾಗಿ ಕ್ಯಾಚ್‌ ಪಡೆಯಬೇಕಾದರೆ ಕೊನೆಯ ಕ್ಷಣದವರೆಗೂ ಚೆಂಡಿನ ಮೇಲೆ ದೃಷ್ಟಿ ಇರಿಸುವುದು ಮತ್ತು ಕ್ರೀಡಾ ಸ್ಫೂರ್ತಿ ಅಗತ್ಯ. ಇಲ್ಲವಾದರೆ ಗುರುತ್ವಾಕರ್ಷಣೆ, ಗಣಿತ, ಓಲಾ–ಉಬರ್‌ ಇನ್ನಿತರ ಸಂಗತಿಗಳತ್ತ ಅನವಶ್ಯಕವಾಗಿ ಬೊಟ್ಟುಮಾಡಬೇಕಾಗುತ್ತದೆ’
‘ದೇಶದ ಆರ್ಥಿಕತೆಗಾಗಿ ಸಾರ್ವಜನಿಕೆ ಹಿತಾಸಕ್ತಿಯ ದೃಷ್ಟಿಯಿಂದ ಈ ರೀತಿ ಪ್ರಕಟಿಸಲಾಗಿದೆ’
ಎಂದು ಟ್ವೀಟ್‌ ಮಾಡಿದ್ದಾರೆ. ಟ್ವೀಟ್‌ ಜೊತೆಗೆ ಕ್ರಿಕೆಟ್‌ ಪಂದ್ಯವೊಂದರಲ್ಲಿ ಕ್ಯಾಚ್‌ ಪಡೆಯುವ ತುಣುಕನ್ನೂ ಹರಿಬಿಟ್ಟಿದ್ದಾರೆ.

ಆರ್ಥಿಕತೆಯ ಬಗ್ಗೆ ಗುರುವಾರ ಮಾತನಾಡಿದ್ದ ಗೋಯಲ್‌, ‘ಟಿವಿಯಲ್ಲಿ ಪ್ರಸಾರವಾಗುವ ಲೆಕ್ಕಾಚಾರಗಳ ಬಗ್ಗೆ ಗಮನಕೊಡಬೇಡಿ. ವಾಸ್ತವವೇ ಬೇರೆ. 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯತ್ತ ನೀವು ನೋಡುತ್ತಿದ್ದರೆ ದೇಶವು ಶೇ 12ರಷ್ಟು ವೃದ್ಧಿ ದರ ಕಾಣಬೇಕು. ಈಗ ಆರ್ಥಿಕ ವೃದ್ಧಿ ದರವು ಶೇ 6ರಷ್ಟಾಗಿದೆ. ಆ ಲೆಕ್ಕಾಚಾರಗಳನ್ನು ಗಮನಿಸಬೇಡಿ. ಅಂಥ ಲೆಕ್ಕಾಚಾರಗಳು ಐನ್‌ಸ್ಟೀನ್‌ಗೆ ಗುರುತ್ವಾಕರ್ಷಣೆಯನ್ನು ಕಂಡುಹಿಡಿಯುವಲ್ಲಿ ಯಾವತ್ತಿಗೂ ಸಹಕಾರಿಯಾಗಿರಲಿಲ್ಲ’ ಎಂದು ಹೇಳಿದ್ದರು.

ಇದನ್ನೂ ಓದಿ: ಗುರುತ್ವ ಕಂಡು ಹಿಡಿದ ಐನ್‌ಸ್ಟೀನ್‌ ಎಂದ ಪೀಯೂಷ್‌; ವೈರಲ್‌ ಆದ ನ್ಯೂಟನ್‌!

ನಿರ್ಮಲಾ ಸೀತಾರಾಮನ್‌ ಅವರು, ಹೊಸ ಪೀಳಿಗೆಯವರು ಸಂಚಾರಕ್ಕೆ ಉಬರ್‌ ಮತ್ತು ಓಲಾ ಕ್ಯಾಬ್‌ಗಳನ್ನು ನೆಚ್ಚಿಕೊಳ್ಳುತ್ತಿದ್ದಾರೆ. ವಾಹನ ಮಾರಾಟ ಕುಸಿತಕ್ಕೆ ಇದೂ ಕಾರಣ ಎಂದು ಹೇಳಿದ್ದರು.

ಇದನ್ನೂ ಓದಿ: ಜನರ ಓಲಾ, ಉಬರ್‌ ಪ್ರಯಾಣವೇ ವಾಹನ ಮಾರಾಟ ಕುಸಿಯಲು ಕಾರಣ: ನಿರ್ಮಲಾ ಸೀತಾರಾಮನ್‌

ಪ್ರತಿಕ್ರಿಯಿಸಿ (+)