ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲು ಮುಚ್ಚಿದ 200 ಕಾರ್ಖಾನೆಗಳು

ತೀವ್ರ ಸಂಕಷ್ಟದಲ್ಲಿ ತಮಿಳುನಾಡಿನ ಜವಳಿ ಉದ್ಯಮ
Last Updated 22 ಆಗಸ್ಟ್ 2019, 2:15 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಜವಳಿ ವಲಯ ತತ್ತರಿಸಿದೆ.2016ರಿಂದೀಚೆಗೆ ಇಲ್ಲಿ 200ಕ್ಕೂ ಹೆಚ್ಚು ಜವಳಿ ಕಾರ್ಖಾನೆಗಳಿಗೆ ಬೀಗ ಹಾಕಲಾಗಿದೆ.ಬಾಂಗ್ಲಾದೇಶ, ವಿಯಟ್ನಾಂ ಹಾಗೂ ಶ್ರೀಲಂಕಾದದಿಂದ ಆಮದಾಗುತ್ತಿರುವ ಕಡಿಮೆಬೆಲೆಯ ನೂಲು ಮತ್ತು ಉಡುಪು ಹಾಗೂ ದುಬಾರಿ ಬೆಲೆಯ ಕಚ್ಚಾವಸ್ತು ಇದಕ್ಕೆ ಕಾರಣ.

ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ಇದನ್ನು ಪುಷ್ಠೀಕರಿಸಿವೆ. 2019ರ ಎರಡನೇ ತ್ರೈಮಾಸಿಕದಲ್ಲಿ ಹತ್ತಿ ಉತ್ಪನ್ನಗಳ ರಫ್ತಿನಲ್ಲಿ ಶೇ 34.6ರಷ್ಟು ಕುಸಿತ ಕಂಡುಬಂದಿದೆ.

ಅಂತರರಾಷ್ಟ್ರೀಯ ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಕೊಳ್ಳುವವರು ಇಲ್ಲದ ಕಾರಣ ತಿರುಪ್ಪೂರು ಹಾಗೂ ಕೊಯಮತ್ತೂರಿನ ಜವಳಿ ಕಾರ್ಖಾನೆಗಳಲ್ಲಿ ಹೇರಳವಾದ ದಾಸ್ತಾನು ಇದೆ. ಹೀಗಾಗಿ ಈ ಕಂಪನಿಗಳೂ ಮುಂದಿನ ದಿನಗಳಲ್ಲಿ ಬಾಗಿಲು ಹಾಕುವ ಹಂತದಲ್ಲಿವೆ. ಕಾರ್ಖಾನೆಗಳನ್ನು ಮುಚ್ಚುವುದರಿಂದ ಸುಮಾರು 1 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಳ್ಳವು ಭೀತಿಯಲ್ಲಿದ್ದಾರೆ.

ಮೂರು ತಿಂಗಳ ಹಿಂದೆ ಬಹುತೇಕ ಜವಳಿ ಕಾರ್ಖಾನೆಗಳು ಉತ್ಪಾದನೆ ಪ್ರಮಾಣವನ್ನು ಶೇ 30ರಷ್ಟು ಕಡಿತಗೊಳಿಸಿವೆ. ನೂಲಿಗೆ ಬೇಡಿಕೆ ಕುಸಿದಿರುವುದಿಂದ ಇನ್ನಷ್ಟು ಕಾರ್ಖಾನೆಗಳು ಮುಂದಿನ ಕೆಲವೇ ತಿಂಗಳಲ್ಲಿ ಬಂದ್ ಆಗಲಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಉದ್ದಿಮೆಯ ಬಹುಪಾಲು ಕಂಪನಿಗಳು ಮುಂದಿನ ವರ್ಷ ಈ ವಲಯದಲ್ಲಿ ಇರುವುದಿಲ್ಲ’ ಎಂದು ಓಪನ್ ಎಂಡ್ ಜವಳಿ ಕಾರ್ಖಾನೆ ಸಂಘಟನೆ ಮುಖ್ಯಸ್ಥ (ಒಎಸ್‌ಎಂಎ) ಎಂ.ಜಯಬಾಲ್ ಹೇಳುತ್ತಾರೆ.

ಕಳೆದ ಒಂದು ದಶಕದ ಅವಧಿಯಲ್ಲಿ ಚೀನಾ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಕಾರ್ಖಾನೆಗಳು ಆರಂಭವಾಗಿದ್ದವು. ಆದರೆ ವಿಯಟ್ನಾಂ, ಬಾಂಗ್ಲಾದೇಶಗಳು ಕಡಿಮೆ ಬೆಲೆಯಲ್ಲಿ ಜವಳಿ ಉತ್ಪನ್ನಗಳನ್ನು ಚೀನಾಕ್ಕೆ ಕಳುಹಿಸುತ್ತಿವುದರಿಂದ ಇಲ್ಲಿನ ಕಾರ್ಖಾನೆಗಳು ಸಂಕಷ್ಟಕ್ಕೆ ಸಿಲುಕಿವೆ.

ಚೀನಾ–ಅಮೆರಿಕ ಮಧ್ಯೆ ಉಂಟಾಗಿರುವ ವ್ಯಾಪಾರ ಬಿಕ್ಕಟ್ಟನ್ನು ಭಾರತ ಸರ್ಕಾರ ತನ್ನ ಲಾಭಕ್ಕೆ ಬಳಸಿಕೊಂಡು, ಉತ್ಪನ್ನಗಳನ್ನು ಅಮೆರಿಕಕ್ಕೆ ಉತ್ಪನ್ನಗಳನ್ನು ರಫ್ತು ಮಾಡಲು ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಉದ್ಯಮಿಯೊಬ್ಬರ ಸಲಹೆ.

‘ವಿದೇಶದ ಗ್ರಾಹಕರು ಭಾರತದಿಂದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಶುಲ್ಕ ಭರಿಸಬೇಕಿದೆ. ಆದರೆ ಚೀನಾ ಮತ್ತು ಅಮೆರಿಕಕ್ಕೆ ಉತ್ಪನ್ನ ಕಳುಹಿಸುವ ಶ್ರೀಲಂಕಾ, ಬಾಂಗ್ಲಾದಲ್ಲಿ ಆಮದು ಶುಲ್ಕದ ರಗಳೆಯಿಲ್ಲ. ಹೀಗಾಗಿ ದೊಡ್ಡ ಮಾರುಕಟ್ಟೆಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಕು ಎನ್ನುವುದು’ ತಿರುಪ್ಪೂರ್‌ನ ನೈಟ್‌ವಿಯರ್ ಸಂಸ್ಥೆಯ ಆಗ್ರಹ.

ಉದ್ದಿಮೆಯನ್ನು ಉಳಿಸಬೇಕಾದರೆ, ತೆರಿಗೆ ಸುಧಾರಣೆ ಆಗಬೇಕು ಎನ್ನುತ್ತದೆ ಉದ್ದಿಮೆ ವಲಯ.

ಬಾಂಗ್ಲಾ, ಶ್ರೀಲಂಕಾ, ಚೀನಾ ಹಾಗೂ ಪಾಕಿಸ್ತಾನ ಸರ್ಕಾರಗಳ ಸಬ್ಸಿಡಿ ವ್ಯವಸ್ಥೆಯಿಂದ ಅಲ್ಲಿನ ಉದ್ಯಮಗಳು ಉತ್ತಮವಾಗಿವೆ ಎನ್ನುತ್ತಾರೆ ಅಮರಜ್ಯೋತಿ ಮಿಲ್ಸ್‌ನ ಎಂ.ಡಿ. ಪ್ರೇಮಚಂದ್ರ. ಪೆರು, ಟರ್ಕಿ ದೇಶಗಳಿಂದಲೂ ಸ್ಪರ್ಧೆ ಇದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT