ಶಬರಿಮಲೆ: ನಾಳೆ ಮಧ್ಯರಾತ್ರಿಯಿಂದ ನಿಷೇಧಾಜ್ಞೆ ಜಾರಿ

7

ಶಬರಿಮಲೆ: ನಾಳೆ ಮಧ್ಯರಾತ್ರಿಯಿಂದ ನಿಷೇಧಾಜ್ಞೆ ಜಾರಿ

Published:
Updated:

ಪತ್ತನಂತಿಟ್ಟ: ನವೆಂಬರ್ 3 ಶನಿವಾರ ಮಧ್ಯರಾತ್ರಿಯಿಂದ ನವೆಂಬರ್ 6 ನೇ ತಾರೀಖು ಮಧ್ಯರಾತ್ರಿವರೆಗೆ ಪಂಪಾ, ಇಲವುಂಕಲ್, ನಿಲಯ್ಕಲ್ ಮತ್ತು ಸನ್ನಿಧಾನದಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವುದಾಗಿ ಜಿಲ್ಲಾಧಿಕಾರಿ ಪಿ.ಬಿ.ನೂಹ್ ಹೇಳಿದ್ದಾರೆ.

ಚಿತ್ತಿರಆಟ್ಟತ್ತಿರುನಾಳ್ ಪ್ರಯುಕ್ತ  ನವೆಂಬರ್ 5ರಂದು ಶಬರಿಮಲೆ ಬಾಗಿಲು ತೆರೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಶಬರಿಮಲೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ವಡಶೇರಿಕ್ಕರದಿಂದ ಸನ್ನಿಧಾನದವರೆಗೆ ನಾಲ್ಕು ಪ್ರದೇಶಗಳಲ್ಲಿ  ಪೊಲೀಸ್ ಪಡೆ ನಿಯೋಜನೆ  ಮಾಡಲಾಗಿದೆ.

 ದಕ್ಷಿಣ ವಲಯ ಎಡಿಜಿಪಿ ಅನಿಲ್‍ಕಾಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ನಾಳೆಯಿಂದ ಸನ್ನಿಧಾನ, ಪಂಪಾ ಮತ್ತು ನಿಲಯ್ಕಲ್‍ನಲ್ಲಿ ಠಿಕಾಣಿ ಹೂಡಲಿದ್ದಾರೆ.

5ನೇ ತಾರೀಖಿನಿಂದ ಶಬರಿಮಲೆ ದೇವರ ದರ್ಶನಕ್ಕೆ ಮಹಿಳೆಯರು ಬಂದರೆ ಅವರ ಸುರಕ್ಷೆಗಾಗಿ ಪೊಲೀಸರು ಸಿದ್ಧರಾಗಿದ್ದಾರೆ ಎಂದು ಪತ್ತನಂತಿಟ್ಟ ಎಸ್‍ಪಿ ಟಿ.ನಾರಾಯಣನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !