ನೀನು ಎಂದಿಗೂ ಲಂಚ ಸ್ವೀಕರಿಸುವುದಿಲ್ಲ ಎಂದು ಮಾತು ಕೊಡು ಎಂದಿದ್ದರು ಅಮ್ಮ: ಮೋದಿ

7

ನೀನು ಎಂದಿಗೂ ಲಂಚ ಸ್ವೀಕರಿಸುವುದಿಲ್ಲ ಎಂದು ಮಾತು ಕೊಡು ಎಂದಿದ್ದರು ಅಮ್ಮ: ಮೋದಿ

Published:
Updated:

ಮುಂಬೈ: ನಾನು ಗುಜರಾತಿನ ಮುಖ್ಯಮಂತ್ರಿಯಾದಾಗ ನನ್ನ ಕೆಲಸ ಏನು ಎಂಬುದು ನನ್ನ ಅಮ್ಮನಿಗೆ ತಿಳಿದಿರಲಿಲ್ಲ. ಆದರೆ ಎಂದಿಗೂ ಲಂಚ ಸ್ವೀಕರಿಸುವುದಿಲ್ಲ ಎಂದು ಮಾತು ಕೊಡು ಎಂದಿದ್ದರು ಅಮ್ಮ. ನಾನು ದೇಶದ ಪ್ರಧಾನಿ ಆಗುವುದಕ್ಕಿಂತ ಗುಜರಾತಿನ ಮುಖ್ಯಮಂತ್ರಿ ಆಗಿದ್ದೇ ನನ್ನ ಅಮ್ಮನ ಪಾಲಿಗೆ ದೊಡ್ಡ ಮೈಲಿಗಲ್ಲು ಆಗಿತ್ತು ಎಂದು ನರೇಂದ್ರ ಮೋದಿ ಹೇಳಿದ್ದಾರೆ.

Humans of Bombay ಫೇಸ್‍ಬುಕ್ ಪುಟಕ್ಕೆ ನೀಡಿದ ಸಂದರ್ಶನದಲ್ಲಿ ಮೋದಿ ತಮ್ಮ ಅಮ್ಮನ ಬಗ್ಗೆ ಮಾತನಾಡಿದ್ದಾರೆ.
ನಾನು ಆಗ ದೆಹಲಿಯಲ್ಲಿ ವಾಸವಿದ್ದೆ. ಪ್ರತಿಜ್ಞೆ ಸ್ವೀಕಾರ ಮಾಡುವ ಮುನ್ನ ನಾನು ಅಮ್ಮನನ್ನು ಭೇಟಿಯಾಗಲು ಅಹಮದಾಬಾದ್‍ಗೆ ಹೋದೆ. ಆಕೆ ಅಲ್ಲಿ ನನ್ನ ಸಹೋದರನೊಂದಿಗೆ ವಾಸಿಸುತ್ತಿದ್ದಾಳೆ.

ನಾನು ಅಹಮದಾಬಾದ್‍ ತಲುಪಿದಾಗ ಅಲ್ಲಿ ಸಂಭ್ರಮಾಚರಣೆ ನಡೆದಿತ್ತು. ಹೀರಾಬೆನ್ ಮೋದಿ (ನನ್ನ ಅಮ್ಮ)ನಿಗೆ  ನಾನು ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದೇನೆ ಎಂಬ ಸುದ್ದಿ ತಿಳಿದಿತ್ತು.

ನಾನು ಯಾವ ಸ್ಥಾನಕ್ಕೇರುತ್ತಿದ್ದೇನೆ ಎಂಬುದು ಅವಳಿಗೆ ತಿಳಿದಿರಲಿಕ್ಕಿಲ್ಲ. ನನ್ನ ಅಮ್ಮ ನನ್ನನ್ನು ನೋಡಿ, ಬಿಗಿದಪ್ಪಿಕೊಂಡು ಹೇಳಿದರು 'ನೀನು ಈಗ ಗುಜರಾತಿಗೆ ಬಂದಿರುವುದೇ ಖುಷಿ'. 
ನೋಡು ಮಗಾ, ನೀನು ಏನು ಮಾಡುತ್ತಿದ್ದಿಯೋ ಎಂಬುದು ನನಗೆ ಗೊತ್ತಿಲ್ಲ. ಆದರೆ ನೀನು ಎಂದಿಗೂ ಲಂಚ ಸ್ವೀಕರಿಸಬೇಡ, ಆ ಪಾಪವನ್ನು ಯಾವತ್ತೂ ಮಾಡುವುದಿಲ್ಲ ಎಂದು ನನಗೆ ಮಾತು ಕೊಡು ಎಂದಿದ್ದಳು. ಅಮ್ಮನ ಮಾತುಗಳು ನನ್ನ ಮೇಲೆ ತುಂಬಾ ಪ್ರಭಾವ ಬೀರಿದವು.

ಇದನ್ನೂ ಓದಿ: ನಾನು  ಪ್ರತಿವರ್ಷ 5 ದಿನ ಕಾಡಿನಲ್ಲಿ ಕಳೆಯುತ್ತಿದ್ದೆ: ನರೇಂದ್ರ ಮೋದಿ

ಬಡತನ ಮತ್ತು ಕಡಿಮೆ ಸವಲತ್ತುಗಳಲ್ಲಿ ಬದುಕಿದ ಆ ಮಹಿಳೆ, ಲಂಚ ಸ್ವೀಕರಿಸುವುದು ಪಾಪ ಎಂದು ಹೇಳಿದ್ದು ನನ್ನ ಹೃದಯಕ್ಕೆ ತಾಕಿತು.
ವರ್ಷಗಳ ಹಿಂದೆ ನನಗೇನಾದರೂ ಸಾಮಾನ್ಯ ಕೆಲಸ ಸಿಕ್ಕಿತು ಎಂದರೆ ಸಾಕು ಆಕೆ ಇಡೀ ಗ್ರಾಮಕ್ಕೆ ಸಿಹಿ ಹಂಚುತ್ತಿದ್ದಳು ನಾನು ಯಾವ ಹುದ್ದೆಯಲ್ಲಿದ್ದೇನೆ ಎಂಬುದು ಮುಖ್ಯವಲ್ಲ. ಆದರೆ ದೇಶದ ವಿಷಯದಲ್ಲಿ ನಾನು ಪ್ರಾಮಾಣಿಕನಾಗಿರಬೇಕು ಎಂದು ಆಕೆ ಬಯಸಿದ್ದಳು ಎಂದು ಮೋದಿ ತಮ್ಮ ಅಮ್ಮನ ಬಗ್ಗೆ ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 35

  Happy
 • 2

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !