ಮೋದಿ ಹೃದಯದಲ್ಲಿ ದಲಿತರಿಗೆ ಸ್ಥಾನವಿಲ್ಲ: ರಾಹುಲ್‌ ವಾಗ್ದಾಳಿ

7

ಮೋದಿ ಹೃದಯದಲ್ಲಿ ದಲಿತರಿಗೆ ಸ್ಥಾನವಿಲ್ಲ: ರಾಹುಲ್‌ ವಾಗ್ದಾಳಿ

Published:
Updated:

ನವದೆಹಲಿ: ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರ್ಬಲಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದಲಿತ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ದೂರಿದರು.

ಸುಪ್ರೀಂ ಕೋರ್ಟ್‌ ಮೂಲಕ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ, ದೆಹಲಿಯ ಜಂತರ್‌ ಮಂತರ್‌ನಲ್ಲಿ ವಿವಿಧ ದಲಿತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಗುರುವಾರ ಸಿಪಿಎಂ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಹಾಗೂ ರಾಹುಲ್‌ ಗಾಂಧಿ ಭಾಗವಹಿಸಿದ್ದರು. 

ಈ ವೇಳೆ ಮಾತನಾಡಿದ ರಾಹುಲ್‌, ಪ್ರಧಾನಿ ನರೇಂದ್ರ ಮೋದಿ ಅವರ ಹೃದಯದಲ್ಲಿ ದಲಿತರಿಗೆ ಯಾವುದೇ ಸ್ಥಾನವಿಲ್ಲ. ಸ್ಥಾನ ಇದ್ದಿದ್ದರೆ ದಲಿತರ ಬಗೆಗಿನ ನೀತಿಗಳು ಭಿನ್ನವಾಗಿರುತ್ತಿದ್ದವು ಎಂದು ಟೀಕಿಸಿದರು.

ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಅವರು(ಮೋದಿ) ‘ದಲಿತನ್‌ ಕೊ ಸಫಾಯಿ ಕರ್ನೆ ಸೇ ಆನಂದ್‌ ಮಿಲ್ತಾ ಹೈ’ 'Daliton ko safai karne se anand milta hai') ಎಂದು ಪುಸ್ತಕದಲ್ಲಿ ಬರೆದಿದ್ದಾರೆ. ಇದು ಅವರ ಸಿದ್ಧಾಂತ ಎಂದು ಹೇಳಿದರು.

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ದಲಿತ ವಿರೋಧಿಗಳು ಎಂದ ರಾಹುಲ್‌, ಬಿಜೆಪಿ ಸರ್ಕಾರ ಎಲ್ಲಾ ದಲಿತರನ್ನು ತುಳಿದು, ಹೊಸಕಿ ಹಾಕಿದೆ ಎಂದು ದೂರಿದರು.

2019ರ ಚುನಾವಣೆಯಲ್ಲಿ ದೇಶದ ಜನರು ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸುವ ಮೂಲಕ ಆ ಪಕ್ಷಕ್ಕೆ(ಬಿಜೆಪಿ) ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.


ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡ ಸೀತಾರಾಮ್‌ ಯೆಚೂರಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭಾಗವಹಿಸಿದ್ದರು.

ಜಂತರ್‌ ಮಂತರ್‌ನಲ್ಲಿ ಸಿಪಿಎಂ ನಾಯಕರೊಟ್ಟಿಗೆ ಪ್ರತಿಭಟನೆಯಲ್ಲಿ ರಾಹುಲ್‌ ಗಾಂಧಿ ಅವರು ಭಾಗವಹಿಸಿದ್ದ ಚಿತ್ರಗಳನ್ನೂ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !