ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ: 60 ಮಂದಿಯ ಬಂಧನ; ಮುಖ್ಯಮಂತ್ರಿ ಪಿಣರಾಯಿ ನಿವಾಸಕ್ಕೂ ಮುತ್ತಿಗೆ

Last Updated 19 ನವೆಂಬರ್ 2018, 5:37 IST
ಅಕ್ಷರ ಗಾತ್ರ

ತಿರುವನಂತಪುರ: ಶಬರಿಮಲೆಯ ಅಯ್ಯಪ್ಪ ದೇಗುಲದೊಳಗೆ ಇದುವರೆಗೂ ಮಹಿಳೆಯರಿಗೆ ಅವಕಾಶ ನೀಡದಿರುವುದನ್ನು ಖಂಡಿಸಿ, ನಿಷೇಧಾಜ್ಞೆ ನಡುವೆಕೈಗೊಂಡಿದ್ದ ‌‌ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು,ಭಾನುವಾರ ತಡರಾತ್ರಿ ಬಿಜೆಪಿ ಮುಖಂಡ ಸೇರಿದಂತೆ60 ಮಂದಿ ಭಕ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಅಲ್ಲದೇ ಭಕ್ತರ ಬಂಧನವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸಾಕಷ್ಟು ಪ್ರತಿಭಟನಾನಿರತರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರತಿರುವನಂತಪುರಂನಲ್ಲಿರುವ ಅಧಿಕೃತ ನಿವಾಸ ಎದುರು ಜಮಾಯಿಸಿದ್ದು, ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ರಾಜ್ಯದ ಅರಣ್‌ಮುಲಾ, ಕೊಚ್ಚಿ, ಕೊಲ್ಲಮ್, ಖಲಾಡಿ, ಮಲ್ಲಪುರಂ, ಇಡುಕ್ಕಿ ಹೀಗೆ ಹಲವು ಪ್ರದೇಶಗಳಲ್ಲಿ ಪ್ರತಿಭಟನೆ ಕಾವು ಹೆಚ್ಚಾಗಿದೆ.

ಅಯ್ಯಪ್ಪ ದೇವಾಲಯದಲ್ಲಿ ಹರಿವರಸನಮ್ಹಾಡಿದ ನಂತರ ಸನ್ನಿಧಾನದಿಂದ ಹೊರಹೋಗುವಂತೆ ಪೊಲೀಸರು ಮನವಿ ಮಾಡಿದ್ದರು. ಇದಕ್ಕೆ ಪ್ರತಿರೋಧವೊಡ್ಡಿದ ಕಾರಣ ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹರಿವರಸನಮ್ ಮುಗಿದ ನಂತರ ದೇವಾಲಯದಿಂದ ಹೊರಡುವಂತೆ ಸೂಚನೆ ನೀಡಲಾಗಿತ್ತು. ಆದರೆ ಇದನ್ನು ವಿರೋಧಿಸಿದರು. ಭಕ್ತರ ಪ್ರಾರ್ಥನೆಗೆ ಪೊಲೀಸರು ಯಾವುದೇ ಕಾರಣಕ್ಕೂ ಅಡ್ಡಿಪಡಿಸಲಿಲ್ಲ ಎಂದು ಎಸ್‌ಪಿ ಪ್ರತೀಶ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT