ದೇಶಕ್ಕಾಗಿ ಮಡಿದ ಅಪ್ಪನ ಬಗ್ಗೆ ಹೆಮ್ಮೆಯಿದೆ: ಹುತಾತ್ಮ ಯೋಧನ ಪುತ್ರಿ

ಶನಿವಾರ, ಮೇ 25, 2019
32 °C

ದೇಶಕ್ಕಾಗಿ ಮಡಿದ ಅಪ್ಪನ ಬಗ್ಗೆ ಹೆಮ್ಮೆಯಿದೆ: ಹುತಾತ್ಮ ಯೋಧನ ಪುತ್ರಿ

Published:
Updated:

ಭುವನೇಶ್ವರ್: ನನ್ನ ಅಪ್ಪನನ್ನು ಕಳೆದುಕೊಂಡದ್ದಕ್ಕೆ ದುಃಖವಿದೆ. ಅದೇ ವೇಳೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಪ್ಪನ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಹುತಾತ್ಮ ಯೋಧ ಪ್ರಸನ್ನ ಕುಮಾರ್ ಸಾಹೊ ಅವರ ಪುತ್ರಿ ರೋಸಿ ಹೇಳಿದ್ದಾರೆ.

ಪ್ರಸನ್ನ ಕುಮಾರ್ ಜಮ್ಮ ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಪಡೆ ಸೇರುವ ಮುನ್ನ ಒಡಿಶಾದ ಜಗತ್‍ಸಿಂಗ್ ಪುರ್ ಜಿಲ್ಲೆಯ ಪರೀಸ್ಕಿಹರ ಗ್ರಾಮದಲ್ಲಿರುವ ತಮ್ಮ ಕುಟುಂಬದೊಂದಿಗೆ ಎರಡು ತಿಂಗಳು ಕಳೆದಿದ್ದರು. 

ಗುರುವಾರ ಮಧ್ಯಾಹ್ನ ಪುಲ್ವಾಮಾ ಜಿಲ್ಲೆಯಲ್ಲಿ  ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ   ಪ್ರಸನ್ನ ಕುಮಾರ್  ಪತ್ನಿ ಮೀನಾ, 18ರ ಹರೆಯದ ಪುತ್ರಿ ರೋಸಿ ಮತ್ತು 16ರ ಹರೆಯದ ಪುತ್ರ ಜಗನ್ ಅವರನ್ನು ಅಗಲಿದ್ದಾರೆ. ಪ್ರಸನ್ನ ಕುಮಾರ್ ಸಾಹೊ 1995ರಲ್ಲಿ ಸಿಆರ್‌ಪಿಎಫ್ ಸೇರಿದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !