ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್ ತುಳಿದರು.. ಎಲೆಕ್ಟ್ರಿಕ್ ಕಾರಿನಲ್ಲಿ ಬಂದರು...

Last Updated 18 ನವೆಂಬರ್ 2019, 20:13 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಲವು ಸಂಸದರು ಸೈಕಲ್ ಏರಿ, ಮುಖಗವಸು ಧರಿಸಿ, ಇನ್ನೂ ಕೆಲವರು ಬ್ಯಾಟರಿಚಾಲಿತ ವಾಹನಗಳಲ್ಲಿಚಳಿಗಾಲದ ಅಧಿವೇಶನದ ಮೊದಲ ದಿನ ಸಂಸತ್ ಭವನಕ್ಕೆ ಬಂದರು.

ಏರುತ್ತಿರುವ ವಾಯುಮಾಲಿನ್ಯವನ್ನು ಖಂಡಿಸಿ, ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಅವರು ಮುಖಗವಸು ಧರಿಸಿ ಸಂಸತ್ ಭವನ ಆವರಣದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಕಾಣಿಸಿದರು. ಬಿಜೆಪಿ ಸಂಸದ ಮನ್ಸುಖ್ ಮಾಂಡವೀಯ, ಮನೋಜ್ ತಿವಾರಿ ಹಾಗೂ ಇತರರು ಸೈಕಲ್ ತುಳಿದುಕೊಂಡು ಸಂಸತ್ತಿಗೆ ಬಂದರು.

ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ಬ್ಯಾಟರಿ ಚಾಲಿತವಾಹನದಲ್ಲಿ ಆಗಮಿಸಿದರು. ಈ ವಾಹನಗಳು ಮಾಲಿನ್ಯ ಮಾಡುವುದಿಲ್ಲ. ಮಾಲಿನ್ಯ ವಿರುದ್ಧದ ಹೋರಾಟದಲ್ಲಿ ಜನರು ಭಾಗಿಯಾಗಿ, ಸಾರ್ವಜನಿಕ ಸಾರಿಗೆ, ವಿದ್ಯುತ್ ಚಾಲಿತ ವಾಹನಗಳನ್ನು ಬಳಸುವಂತೆ ಜಾವಡೇಕರ್ ಕರೆ ನೀಡಿದರು.

ದೆಹಲಿಯಲ್ಲಿ ವಾಯು ಗುಣಮಟ್ಟ ಸೋಮವಾರ ಕೊಂಚ ಸುಧಾರಿಸಿದ್ದರೂ, ಕಳಪೆ ಗುಣಮಟ್ಟ ಮುಂದುವರಿದಿದೆ. ಭಾನುವಾರ 254 ಇದ್ದ ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) ಸೋಮವಾರ 207ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT