ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಇಆರ್‌ಟಿ ಪಠ್ಯಕ್ರಮ: ಬದಲಾದ ಪ್ರಶ್ನೆಪತ್ರಿಕೆ ಕ್ರಮ

Last Updated 22 ಜನವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿ.ಯು.ವಾರ್ಷಿಕ ಪರೀಕ್ಷೆಯಲ್ಲಿ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರದ ಪ್ರಶ್ನೆ ಪತ್ರಿಕೆಗಳ ಅಂಕಕ್ರಮವು ಉಳಿದ ವಿಷಯದ ಪತ್ರಿಕೆಗಳಿಗಿಂತ ಭಿನ್ನವಾಗಿರುತ್ತದೆ.

ಈ ಹಿಂದಿನ ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆಯ ಎ ವಿಭಾಗದಲ್ಲಿ ಒಂದು ಅಂಕದ 10 ಪ್ರಶ್ನೆಗಳು, ಬಿ ವಿಭಾಗದಲ್ಲಿ 2 ಅಂಕಗಳ 10 ಪ್ರಶ್ನೆಗಳು, ಸಿ ವಿಭಾಗದಲ್ಲಿ 5 ಅಂಕದ 8 ಪ್ರಶ್ನೆಗಳು ಇರುತ್ತಿದ್ದವು. ಡಿ ವಿಭಾಗದಲ್ಲಿ 10 ಅಂಕದ 2 ಪ್ರಶ್ನೆಗಳು ಹಾಗೂ ಇ ವಿಭಾಗದಲ್ಲಿ 5 ಅಂಕದ ಎರಡು ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಿತ್ತು.

ಈಗ ಎ ವಿಭಾಗದಲ್ಲಿ 1 ಅಂಕದ ಬಹು ಆಯ್ಕೆ ಮಾದರಿ(5 ಪ್ರಶ್ನೆ), ಬಿಟ್ಟಸ್ಥಳ ತುಂಬಿರಿ(5 ಅಂಕ), ಹೊಂದಿಸಿ ಬರೆಯಿರಿ(5 ಅಂಕ) ಸೇರಿಸಿ ಪ್ರಶ್ನಾಕ್ರಮ ರಚಿಸಲಾಗಿದೆ. 2 ಅಂಕಗಳ 9 ಪ್ರಶ್ನೆಗಳು, 4 ಅಂಕಗಳ 7 ಪ್ರಶ್ನೆಗಳು, 6 ಅಂಕಗಳ 4 ಪ್ರಶ್ನೆಗಳು ಮತ್ತು 5 ಅಂಕಗಳ 2 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಿದೆ. ಹೊಸ ಕ್ರಮವನ್ನು ಬಹುತೇಕ ವಿದ್ಯಾರ್ಥಿಗಳು ಸ್ವಾಗತಿಸಿದ್ದಾರೆ.

‘ಈ ವರ್ಷದಿಂದಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರ ವಿಷಯಗಳಿಗೆರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪಠ್ಯಕ್ರಮ ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ ಈ ವಿಷಯಗಳಿಗೆ ಮಾತ್ರ ಪ್ರಶ್ನೆಪತ್ರಿಕೆಯ ಅಂಕ ಕ್ರಮ ಬದಲಿಸಲಾಗಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT