ಪುದುಚೇರಿ: ರಾಜ್ಯಪಾಲೆ ಬೇಡಿ ವರ್ತನೆ ಖಂಡಿಸಿ ಸಿ.ಎಂ.ಧರಣಿ

7

ಪುದುಚೇರಿ: ರಾಜ್ಯಪಾಲೆ ಬೇಡಿ ವರ್ತನೆ ಖಂಡಿಸಿ ಸಿ.ಎಂ.ಧರಣಿ

Published:
Updated:

ಚೆನ್ನೈ: ‘ರಾಜ್ಯಪಾಲರಾದ ಕಿರಣ್‌ ಬೇಡಿ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ’ ಎಂದು ದೂರಿ  ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ಬೇಡಿ ಅವರ ನಿವಾಸದ ಎದುರು ಬುಧವಾರ ಧರಣಿ ನಡೆಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು.

ತಮ್ಮ ತಮ್ಮ ಕಚೇರಿಗಳಿಂದ ಹೊರಟ ಸಂಪುಟ ಸಹೋದ್ಯೋಗಿಗಳೊಂದಿಗೆ ರಾಜ್ಯಪಾಲರ ಗೃಹ–ಕಚೇರಿ ರಾಜ್‌ ನಿವಾಸದ ಬಳಿ ಮಧ್ಯಾಹ್ನ ಬಂದ ಮುಖ್ಯಮಂತ್ರಿ ನಾರಾಯಣಸ್ವಾಮಿ, ರಾತ್ರಿಯಿಡೀ ಧರಣಿ ನಡೆಸಿದರು.

ಧರಣಿ ನಡೆಸುತ್ತಿದ್ದ ಸ್ಥಳದ ಬಳಿಯ ರಸ್ತೆಯಲ್ಲಿಯೇ ಊಟ ಮಾಡಿದ ಅವರು, ಕೆಲವು ಕಡತಗಳನ್ನು ಅದೇ ಸ್ಥಳದಲ್ಲಿ ವಿಲೇವಾರಿ ಮಾಡಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !