ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ದಾಳಿಗೆ ಪ್ರತೀಕಾರವಾಗಿ ಮುಂದಿನ ಕ್ರಮಗಳ ಚರ್ಚೆಗೆ ಸರ್ವಪಕ್ಷ ಸಭೆ ಆರಂಭ

Last Updated 16 ಫೆಬ್ರುವರಿ 2019, 9:11 IST
ಅಕ್ಷರ ಗಾತ್ರ

ನವದೆಹಲಿ:ಜಮ್ಮು ಕಾಶ್ಮೀರದ ಅವೋಂತಿಪೊರದಲ್ಲಿ ಉಗ್ರರು ನಡೆಸಿದ ದಾಳಿ ಸಂಬಂಧ ಮುಂದಿನ ಹೆಜ್ಜೆಯಾಗಿ ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚಿಸಲು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರ ನೇತೃತ್ವದಲ್ಲಿ ಶನಿವಾರ ಸರ್ವ ಪಕ್ಷ ಸಭೆ ಆರಂಭವಾಗಿದೆ.

ಸಂಸತ್‌ನಲ್ಲಿ ನಡೆಯುತ್ತಿರುವಸಭೆಗೆ ಆಡಳಿತ ಪಕ್ಷಬಿಜೆಪಿ, ಕಾಂಗ್ರೆಸ್‌,ಜೆಡಿಯು, ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್‌ ಸೇರಿದಂತೆ ವಿವಿಧಪಕ್ಷಗಳ ಮುಖಂಡರು ಭಾಗವಹಿಸಿದ್ದಾರೆ.

ಪಕ್ಷ ಬೇಧ ಮರೆತು ಸರ್ವರೂ ಒಮ್ಮತದಿಂದರಾಷ್ಟ್ರ ರಕ್ಷಣೆಗಾಗಿಕ್ರಮಕ್ಕೆ ಮುಂದಾಗಬೇಕು ಎಂಬ ಆಶಯದಲ್ಲಿದ್ದಾರೆ.

ಉಗ್ರರ ದಾಳಿ ಘಟನೆ ಬಳಿಕ ನಿನ್ನೆಯಷ್ಟೇ ರಾಜನಾಥ ಸಿಂಗ್‌ ಅವರು ಶ್ರೀನಗರಕ್ಕೆ ಭೇಟಿ ನೀಡಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಿ, ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟಿದ್ದರು. ಅಧಿಕಾರಿಗಳಿಂದ ಪರಿಸ್ಥಿತಿಯ ಮಾಹಿತಿ ಪಡೆದಿದ್ದರು. ಬಳಿಕ, ಆಸ್ಪತ್ರೆಗೆ ತೆರಳಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರ ಯೋಗಕ್ಷೇಮನ್ನು ವಿಚಾರಿಸಿದ್ದರು.

ರಾತ್ರಿ ದೆಹಲಿಯ ಪಾಲಂ ವಿಮಾನನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT