ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮಾ ದಾಳಿ: ಬದಲಾದ ರಾಜಕೀಯ ಕಾರ್ಯತಂತ್ರ

ಪುಲ್ವಾಮಾ ಘಟನೆ, ವಾಯು ದಾಳಿ ಬಳಿಕ ವಿಭಿನ್ನ ಸನ್ನಿವೇಶ
Last Updated 27 ಫೆಬ್ರುವರಿ 2019, 20:30 IST
ಅಕ್ಷರ ಗಾತ್ರ

ನವದೆಹಲಿ: ಪುಲ್ವಾಮಾ ದಾಳಿ ಮತ್ತು ಎರಡನೇ ನಿರ್ದಿಷ್ಟ ದಾಳಿ ಬಳಿಕ ದೇಶದ ರಾಜಕೀಯ ಸನ್ನಿವೇಶವೂ ಬದಲಾಗುತ್ತಿದೆ.

ಪಾಕಿಸ್ತಾನದ ಬಾಲಾಕೋಟ್‌ ಮೇಲೆ ನಡೆಸಿದ ವಾಯು ದಾಳಿ ಬಿಜೆಪಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿವೆ ಎನ್ನುವ ಅಭಿಪ್ರಾಯ
ವ್ಯಕ್ತವಾಗುತ್ತಿರುವುದರಿಂದ ವಿರೋಧ ಪಕ್ಷಗಳು ತಮ್ಮ ರಾಜಕೀಯ ತಂತ್ರವನ್ನು ಬದಲಾಯಿಸಲು ಮುಂದಾಗಿವೆ.

ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ರಾಜಕೀಯ ಪಕ್ಷಗಳು ಈ ಎರಡು ಮಹತ್ವದ ಘಟನೆಗಳನ್ನು ಚುನಾವಣೆ ಸಂದರ್ಭದಲ್ಲಿ ಯಾವ ರೀತಿ ಪ್ರಸ್ತಾಪಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಸುತ್ತಿವೆ.

ಪುಲ್ವಾಮಾ ದಾಳಿ ಬಳಿಕ ಕಟು ಟೀಕೆಗೊಳಗಾಗಿದ್ದ ಬಿಜೆಪಿಗೆ ನಿರ್ದಿಷ್ಟ ದಾಳಿ ಅನುಕೂಲಕರ ವಾತಾವರಣ ಸೃಷ್ಟಿಸಿದ್ದು, ಮರುಜೀವ ನೀಡಿದಂತಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ನರೇಂದ್ರ ಮೋದಿ ಅವರ ‘ಬಲಿಷ್ಠ ನಾಯಕತ್ವ’ ದಾಳಿ ನಡೆಸಲು ಕಾರಣ ಎನ್ನುವುದನ್ನು ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ನಡೆಸುತ್ತಿದೆ. ನಾಯಕತ್ವ ವಿಷಯವನ್ನೇ ಮುಂಚೂಣಿಗೆ ತರಲಾಗುತ್ತಿದೆ.

ವಿರೋಧ ಪಕ್ಷಗಳು ಸಹ ವಾಯು ದಾಳಿಗೆ ಬೆಂಬಲ ವ್ಯಕ್ತಪಡಿಸಿ ದೇಶದ ಸೇನಾ ಸಾಮರ್ಥ್ಯವನ್ನು ಕೊಂಡಾಡಿದ್ದರೂ ಬಿಜೆಪಿಗೆ ರಾಜಕೀಯ ಲಾಭವಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಹೀಗಾಗಿಯೇ ಈ ಬಾರಿ ವಿಭಿನ್ನ ನಿಲುವು ವ್ಯಕ್ತಪಡಿಸಿವೆ. ಮೊದಲ ಬಾರಿ ಉರಿಯಲ್ಲಿ ನಿರ್ದಿಷ್ಟ ದಾಳಿ ನಡೆಸಿದಾಗ ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ಹಲವು ಪ್ರಶ್ನೆಗಳನ್ನು ಕೇಳಿದ್ದವು. ಈ ಬಾರಿ ಎಚ್ಚರಿಕೆ ಹೆಜ್ಜೆ ಇಟ್ಟಿರುವ ವಿರೋಧ ಪಕ್ಷಗಳು ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿ, ಪರ್ಯಾಯ ಸೂತ್ರಗಳ ಬಗ್ಗೆ ಯೋಚಿಸುತ್ತಿವೆ.

ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎನ್ನುವುದನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಬೀತುಪಡಿಸಿದೆ ಎನ್ನುವ ಪ್ರಮುಖ ಅಸ್ತ್ರವನ್ನೇ ವಿರೋಧ ಪಕ್ಷಗಳ ವಿರುದ್ಧ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಈ ಎರಡು ಪ್ರಮುಖ ಅಂಶಗಳಿಂದಾಗಿ ಕೃಷಿ ಸಮಸ್ಯೆ, ನಿರುದ್ಯೋಗ ಮುಂತಾದ ಪ್ರಸ್ತುತ ಸಮಸ್ಯೆಗಳು ಗೌಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT