ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಷ್ ನಂಟು: ದಾಖಲೆ ಹಸ್ತಾಂತರ

Last Updated 28 ಫೆಬ್ರುವರಿ 2019, 5:53 IST
ಅಕ್ಷರ ಗಾತ್ರ

ನವದೆಹಲಿ: ಪುಲ್ವಾಮಾ ದಾಳಿಯಲ್ಲಿ ಜೈಷ್–ಎ–ಮೊಹಮ್ಮದ್ ಸಂಘಟನೆ ಕೈವಾಡವಿದೆ ಎಂಬುದಕ್ಕೆ ಸಂಬಂಧಿಸಿದ ‘ನಿರ್ದಿಷ್ಟ ಮಾಹಿತಿ’ಯನ್ನು ಪಾಕಿಸ್ತಾನಕ್ಕೆ ಭಾರತ ಬುಧವಾರ ಹಸ್ತಾಂತರಿಸಿದೆ. ಪಾಕಿಸ್ತಾನದಲ್ಲಿ ಜೈಷ್ ಸಂಘಟನೆಯ ಶಿಬಿರಗಳು ಸಕ್ರಿಯವಾಗಿವೆ ಎಂಬುದನ್ನೂ ಮನವರಿಕೆ ಮಾಡಿಕೊಡಲಾಗಿದೆ.

ಭಾರತದಲ್ಲಿರುವ ಪಾಕಿಸ್ತಾನದ ಹಂಗಾಮಿ ಹೈಕಮಿಷನರ್‌ಗೆ ದಾಖಲೆಗಳನ್ನು ಭಾರತ ನೀಡಿತು. ಭಾರತದ ವಾಯುಗಡಿ ಉಲ್ಲಂಘನೆ ಹಾಗೂ ಪಾಕಿಸ್ತಾನದಿಂದ ಎದುರಾದ ಅಪ್ರಚೋದಿತ ದಾಳಿಯನ್ನು ಭಾರತ ಖಂಡಿಸಿ,ಪ್ರತಿಭಟನೆಯನ್ನೂ ದಾಖಲಿಸಿತು.

‘ನೆರೆಯ ದೇಶದಲ್ಲಿ ಜೈಷ್ ಸಂಘಟನೆಯ ಉಗ್ರಗಾಮಿ ಶಿಬಿರಗಳು ನೆಲೆಯೂರಿರುವುದನ್ನುಪಾಕಿಸ್ತಾನ ಸರ್ಕಾರ ಹಾಗೂ ಅಲ್ಲಿನ ಸೇನೆ ನಿರಂತರವಾಗಿ ನಿರಾಕರಿಸುತ್ತಾ ಬಂದಿರುವ ಬಗ್ಗೆ ಹೈಕಮಿಷನರ್‌ ಎದುರು ವಿಷಾದ ವ್ಯಕ್ತಪಡಿಸಲಾಯಿತು’ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT