ಪುಲ್ವಾಮಾ ರೀತಿ ದಾಳಿಗೆ ಸಂಚು ರೂಪಿಸಿದ್ದ ಉಗ್ರ

ಸೋಮವಾರ, ಏಪ್ರಿಲ್ 22, 2019
31 °C

ಪುಲ್ವಾಮಾ ರೀತಿ ದಾಳಿಗೆ ಸಂಚು ರೂಪಿಸಿದ್ದ ಉಗ್ರ

Published:
Updated:

ಶ್ರೀನಗರ: ಕಳೆದ ವಾರ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಉಗ್ರನೊಬ್ಬ ಪುಲ್ವಾಮಾ ರೀತಿಯ ದಾಳಿಗೆ ಸಂಚು ರೂಪಿಸಿದ್ದ ಎನ್ನುವುದು ಬಹಿರಂಗವಾಗಿದೆ.

ಈ ಬಗ್ಗೆ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫೆ.24ರಂದು ಕುಲ್ಗಾಮ್‌ ಜಿಲ್ಲೆಯ ತುರಿಗಾಮ್‌ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಸಾವಿಗೀಡಾಗಿದ್ದರು. ಈ ಉಗ್ರರು ಜೈಷ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದ್ದರು. ಹತ್ಯೆಯಾಗುವ ಮುನ್ನ ಈ ಉಗ್ರರಲ್ಲಿ ಒಬ್ಬನಾದ ರಾಖಿಬ್‌ ಅಹ್ಮದ್‌ ಎಂಬಾತ ಭದ್ರತಾ ಪಡೆಗಳ ಮೇಲೆ ಆತ್ಮಾಹುತಿ ದಾಳಿ ನಡೆಸುವ ಯೋಜನೆಯನ್ನು ವಿಡಿಯೊದಲ್ಲಿ ವಿವರಿಸಿದ್ದಾನೆ.

‘ನಿಮಗೆ ಈ ವಿಡಿಯೊ ತಲುಪುವ ವೇಳೆ ನಾನು ಸ್ವರ್ಗದಲ್ಲಿರುತ್ತೇನೆ’ ಎಂದು ಅಹ್ಮದ್‌ ಹೇಳಿದ್ದಾನೆ. 6 ನಿಮಿಷಗಳ ಈ ವಿಡಿಯೊದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆಸುವುದನ್ನು ಸಹ ವೈಭವೀಕರಿಸದ್ದಾನೆ.

 ಈ ವಿಡಿಯೊದ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !