ಗುರುವಾರ , ಡಿಸೆಂಬರ್ 5, 2019
21 °C

ಪುಲ್ವಾಮಾ ದಾಳಿ ಸಂಚು: ನಾಲ್ವರು ಜೆಇಎಂ ಉಗ್ರರ ಬಂಧನ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಉಗ್ರ ದಾಳಿಗೆ ಸಂಚು ಹೂಡಿದ ಆರೋಪದಲ್ಲಿ ಜೈಷ್‌ ಎ ಮೊಹಮ್ಮದ್ (ಜೆಇಎಂ) ಸಂಘಟನೆಗೆ ಸೇರಿದ ನಾಲ್ವರು ಉಗ್ರರನ್ನು ಜಮ್ಮು–ಕಾಶ್ಮೀರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಪುಲ್ವಾಮಾದ ಅರಿಹಲ್‌ನಲ್ಲಿ ಜುಲೈನಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಈ ಉಗ್ರರ ಕೈವಾಡವಿತ್ತು. ಶರೀಕ್ ಅಹ್ಮದ್ ಎಂಬ ಉಗ್ರ ವಿದೇಶಿ ಭಯೋತ್ಪಾದಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಈ ಪ್ರದೇಶದಲ್ಲಿ ದಾಳಿಗೆ ಸಂಚು ರೂಪಿಸಿದ್ದ ಎಂಬ ಮಾಹಿತಿ ತನಿಖೆ ವೇಳೆ ದೊರೆತಿತ್ತು.

ಅಖೀಬ್ ಅಹ್ಮದ್, ಅದಿಲ್ ಅಹ್ಮದ್ ಮತ್ತು ಒವೈಸ್ ಅಹ್ಮದ್ ಎಂಬುವವರ ಜತೆ ಸೇರಿ ಶರೀಕ್ ಅಹ್ಮದ್ ದಾಳಿಗೆ ಸಂಚು ಹೂಡಿದ್ದ. ಈ ನಾಲ್ವರಿಗೂ ಜೆಇಎಂ ಜತೆ ನಂಟಿದೆ ಎಂಬುದು ತನಿಖೆಯಿಂದ ತಿಳಿದುಬಂದಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು