ಯೂಟ್ಯೂಬ್‌ನಿಂದ ಪಾಕ್ ಗಾಯಕರ ಹಾಡು ತೆರವುಗೊಳಿಸಿದ ಟಿ–ಸಿರೀಸ್‌

ಭಾನುವಾರ, ಮೇ 19, 2019
34 °C
ಪುಲ್ವಾಮಾ ದಾಳಿ: ಎಂಎನ್‌ಎಸ್ ಆಗ್ರಹಕ್ಕೆ ಮಣಿದ ಟಿ–ಸಿರೀಸ್‌

ಯೂಟ್ಯೂಬ್‌ನಿಂದ ಪಾಕ್ ಗಾಯಕರ ಹಾಡು ತೆರವುಗೊಳಿಸಿದ ಟಿ–ಸಿರೀಸ್‌

Published:
Updated:

ಮುಂಬೈ: ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯ ಹಿನ್ನೆಲೆಯಲ್ಲಿ ತನ್ನ ಯೂಟ್ಯೂಬ್‌ ಚಾನೆಲ್‌ನಿಂದ ಪಾಕಿಸ್ತಾನಿ ಗಾಯಕರ ಹಾಡುಗಳನ್ನು ಟಿ–ಸಿರೀಸ್‌ ತೆರವುಗೊಳಿಸಿದೆ. ಪಾಕಿಸ್ತಾನಿ ಗಾಯಕರ ಹಾಡುಗಳನ್ನು ತೆರವುಗೊಳಿಸುವಂತೆ ಮತ್ತು ಅವರ ಜತೆ ಕೆಲಸ ಮಾಡದಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಶನಿವಾರ ಮ್ಯೂಸಿಕ್‌ ಕಂಪೆನಿಗಳಿಗೆ ಆಗ್ರಹಿಸಿತ್ತು.

ಪಾಕಿಸ್ತಾನದ ಗಾಯಕರಾದ ಫತೇಹ್ ಅಲಿ ಖಾನ್ ಮತ್ತು ಅತಿಫ್ ಅಸ್ಲಾಂ ಅವರ ಆಲ್ಪಂಗಳನ್ನು ಹೊರತರಲು ಟಿ– ಸಿರೀಸ್‌ ಈಚೆಗಷ್ಟೇ ಒಪ್ಪಂದ ಮಾಡಿಕೊಂಡಿತ್ತು.

‘ಪಾಕಿಸ್ತಾನಿ ಗಾಯಕರ ಜತೆ ಕೆಲಸ ಮಾಡದಂತೆ ಟಿ–ಸಿರೀಸ್‌, ಸೋನಿ ಮ್ಯೂಸಿಕ್, ವೀನಸ್, ಟಿಪ್ಸ್‌ ಮ್ಯೂಸಿಕ್ ಮತ್ತಿತರ ಭಾರತೀಯ ಮ್ಯೂಸಿಕ್‌ ಕಂಪೆನಿಗಳಿಗೆ ಸೂಚಿಸಿದ್ದೇವೆ. ಈ ಕಂಪೆನಿಗಳು ತಕ್ಷಣವೇ ಅವರೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ನಾವು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಎಂಎನ್‌ಎಸ್‌ನ ಚಲನಚಿತ್ರ ವಿಭಾಗದ ಮುಖ್ಯಸ್ಥ ಅಮೇಯ್ ಖೋಪ್ಕರ್ ತಿಳಿಸಿದ್ದಾರೆ.

2016ರಲ್ಲಿ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಎಲ್ಲ ಪಾಕಿಸ್ತಾನಿ ಕಲಾವಿದರು ಭಾರತ ಬಿಟ್ಟು ತೆರಳುವಂತೆ ಸೂಚಿಸಿದ್ದ ಎಂಎನ್‌ಎಸ್ 48 ಗಂಟೆಗಳ ಗಡುವನ್ನೂ ವಿಧಿಸಿತ್ತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 7

    Happy
  • 2

    Amused
  • 0

    Sad
  • 0

    Frustrated
  • 3

    Angry

Comments:

0 comments

Write the first review for this !