ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಹಾನಾ ಫಾತಿಮಾಳಿಗೆ ವರ್ಗಾವಣೆ: ಇದು ಅಯ್ಯಪ್ಪನ ಅನುಗ್ರಹ ಎಂದ ರೆಹಾನಾ

Last Updated 22 ಅಕ್ಟೋಬರ್ 2018, 10:44 IST
ಅಕ್ಷರ ಗಾತ್ರ

ಕೊಚ್ಚಿ: ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ್ದ ಸಾಮಾಜಿಕ ಕಾರ್ಯಕರ್ತೆ, ಬಿಎಸ್‌ಎನ್ಎಲ್ ಉದ್ಯೋಗಿ ರೆಹನಾ ಫಾತಿಮಾಳನ್ನು ಸಂಸ್ಥೆ ವರ್ಗಾವಣೆ ಮಾಡಿದೆ.ರೆಹಾನಾ ವಿರುದ್ಧ ಆಂತರಿಕ ಸಮಿತಿತನಿಖೆ ಈಗಾಗಲೇ ಆರಂಭವಾಗಿದೆ.ಬಿಎಸ್ಎನ್‍ಎಲ್ ಕೊಚ್ಚಿ ಬೋಟ್ ಜೆಟ್ಟಿ ಶಾಖೆಯಲ್ಲಿ ಉದ್ಯೋಗಿಯಾಗಿದ್ದ ರೆಹಾನಾಳನ್ನು ಈಗ ರವಿಪುರಂ ಶಾಖೆಗೆ ವರ್ಗಾವಣೆ ಮಾಡಲಾಗಿದೆ.

ಶಬರಿಮಲೆಗೆ ಪ್ರವೇಶಿಸಲು ರೆಹಾನಾ ಪ್ರಯತ್ನಿಸಿದ್ದರ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು,. ಕಳೆದ ಶುಕ್ರವಾರ ರೆಹಾನಾ ಮತ್ತು ಆಂಧ್ರ ಪ್ರದೇಶದ ಪತ್ರಕರ್ತೆ ಕವಿತಾ ಜಕ್ಕಾಲ್ ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನಕ್ಕಾಗಿ ಬಂದಿದ್ದರು.180 ಪೊಲೀಸರ ಬಿಗಿ ಭದ್ರತೆಯಲ್ಲಿ ಇವರನ್ನು ನಡಪ್ಪಂದಲ್ ವರೆಗೆ ತಲುಪಿಸಲಾಗಿತ್ತು. ಆದರೆ 18 ಮೆಟ್ಟಲುಗಳನ್ನು ಏರುವುದಕ್ಕೆ ಅಲ್ಲಿ ತೀವ್ರ ಪ್ರತಿಭಟನೆ ಕಂಡು ಬಂದ ಕಾರಣ ಅಯ್ಯಪ್ಪ ದರ್ಶನಕ್ಕೆ ಇವರಿಗೆ ಸಾಧ್ಯವಾಗಲಿಲ್ಲ.

ಪ್ರತಿಭಟನೆಗೆ ಇರುವ ಜಾಗವಲ್ಲ ಶಬರಿಮಲೆ, ಇವರನ್ನು ಸನ್ನಿಧಾನಕ್ಕೆ ಬಿಡಬೇಡಿ ಎಂದು ದೇವಸ್ವಂ ಸಚಿವ ಕಡಕ್ಕಂಪಳ್ಳಿ ಸುರೇಂದ್ರನ್ ಆದೇಶಿಸಿದ್ದರು. ಆದೇಶದ ಮೇರೆಗೆ ಅಲ್ಲಿಂದಲೇ ಹಿಂತಿರುಗುವಂತೆ ಪೊಲೀಸರು ಈ ಮಹಿಳೆಯರಿಗೆ ಒತ್ತಾಯಿಸಿದ್ದರು.

ರೆಹಾನಾ ಫಾತಿಮಾಳನ್ನು ಸನ್ನಿಧಾನಕ್ಕೆ ತಲುಪಿಸಿದ್ದಕ್ಕೆ ಪೊಲೀಸ್ ವರಿಷ್ಠಾಧಿಕಾರಿಎಸ್. ಶ್ರೀಜಿತ್ ವಿರುದ್ದ ಟೀಕಾ ಪ್ರಹಾರ ನಡೆದಿತ್ತು.
ಅದೇ ವೇಳೆ ತಾನು ಐದು ವರ್ಷಗಳ ಹಿಂದೆಯೇ ವರ್ಗಾವಣೆ ಬೇಕು ಎಂದು ಮನವಿ ಮಾಡಿದ್ದೆ. ಶಬರಿಮಲೆ ಹತ್ತಿದ ನಂತರ ಈ ರೀತಿಯ ಆದೇಶ ಸಿಕ್ಕಿದ್ದು ಅಯ್ಯಪ್ಪನ ಅನುಗ್ರಹ ಎಂದು ರೆಹಾನಾ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?
ಸ್ವಾಮಿ ಶರಣಂ
5 ವರ್ಷಗಳ ಹಿಂದೆ ನಾನು ನನ್ನ ಮನೆಯ ಪಕ್ಕದಲ್ಲಿರುವ ಶಾಖೆಗೆ ವರ್ಗಾವಣೆ ಮಾಡಬೇಕೆಂದು ಮನವಿ ಸಲ್ಲಿಸಿದ್ದೆ. ಶಬರಿಮಲೆ ಹತ್ತಿದ ನಂತರ ಆ ಕಾರ್ಯ ಸಿದ್ಧಿಯಾಯಿತು. ಇದೆಲ್ಲವೂ ಅಯ್ಯಪ್ಪ ಸ್ವಾಮಿಯ ಅನುಗ್ರಹ.ಟ್ರಾಫಿಕ್ ಸಮಸ್ಯೆ ನಡುವೆ 6 ಕಿಮೀ ವಾಹನ ಚಲಾಯಿಸಿ ಕಚೇರಿ ತಲುಪುತ್ತಿದ್ದ ನಾನು ಇನ್ನು ಮುಂದೆ ಮನೆಯಿಂದ 2 ನಿಮಿಷ ನಡೆದುಕೊಂಡೇ ಹೋಗಬಹುದು.
ನನಗೆ ವರ್ಗಾವಣೆ ನೀಡಲು ಒಪ್ಪಿದ ಅಧಿಕಾರಿಗಳಿಗೆ ಒಳ್ಳೆಯದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT