ಪುರಿ ರಥಯಾತ್ರೆ: ಲಕ್ಷಾಂತರ ಭಕ್ತರು ಭಾಗಿ

ಶನಿವಾರ, ಜೂಲೈ 20, 2019
28 °C

ಪುರಿ ರಥಯಾತ್ರೆ: ಲಕ್ಷಾಂತರ ಭಕ್ತರು ಭಾಗಿ

Published:
Updated:

ಪುರಿ, ಒಡಿಶಾ (ಪಿಟಿಐ): ಬಹುಢಾ ಯಾತ್ರೆ ಪ್ರಯುಕ್ತ ಶುಕ್ರವಾರ ನಡೆದ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯರ ರಥಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾದರು.

ವರ್ಷದಲ್ಲಿ 9 ದಿನ ಈ ಮೂವರು ದೇವರ ವಿಗ್ರಹಗಳನ್ನು ಸಮೀಪದ ಗುಂಡೀಚ ದೇವಾಲಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಂತೆಯೇ ಇದೇ ಜುಲೈ 4ರಂದು ಈ ಕಾರ್ಯಕ್ರಮ ಜರುಗಿತ್ತು. ಶುಕ್ರವಾರ ಈ ಮೂವರನ್ನು ಮತ್ತೆ ಅದ್ಧೂರಿಯಾಗಿ ಮುಖ್ಯ ದೇವಾಲಯಕ್ಕೆ ರಥಗಳಲ್ಲಿ ಕರೆತರಲಾಯಿತು.

ವಿಗ್ರಹ ಮತ್ತು ರಥಗಳನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಸಾಂಪ್ರದಾಯಿಕ ‘ಪಹಂಡಿ’ ಆಚರಣೆಯೊಂದಿಗೆ, ತಾಳ–ವಾದ್ಯಗಳ ಮೂಲಕ ಜೈಕಾರಗಳೊಂದಿಗೆ ಬರಮಾಡಿಕೊಳ್ಳಲಾಯಿತು. 45 ಅಡಿ ಎತ್ತರದ  ನಂದೀಘೋಷ್ (ಜಗನ್ನಾಥ), 44 ಅಡಿ ಎತ್ತರದ ತಲಧ್ವಜ (ಬಲಭದ್ರ) ಹಾಗೂ 43 ಅಡಿ ಎತ್ತರ ದರ್ಪದಳನ (ಸುಭದ್ರಾ) ರಥಗಳನ್ನು ಭಕ್ತರು ಎಳೆದರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !