ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರವ್‌ಗೆ ಸೇರಿದ ₹170 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

Last Updated 21 ಮೇ 2018, 19:21 IST
ಅಕ್ಷರ ಗಾತ್ರ

ಮುಂಬೈ: ನೀರವ್‌ ಮೋದಿಗೆ ಸೇರಿದ ₹170 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

ನೀರವ್‌ ಮೋದಿ ಮತ್ತು ಆತನ ಸಹವರ್ತಿಗಳಾದ ಮೆಹುಲ್‌ ಚೋಕ್ಸಿ ಹಾಗೂ ಗೀತಾಂಜಲಿ ಸಮೂಹ ಕಂಪನಿಗಳು ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳು, ಸ್ಥಿರ ಸ್ವತ್ತುಗಳು, ವ್ಯಾಪಾರ ಸಂಬಂಧಿತ ಸಂಸ್ಥೆಗಳಲ್ಲಿನ ಷೇರು ಹೂಡಿಕೆಗಳನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಸೋಮವಾರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿ ಪೈಕಿ ಮುಂಬೈನಲ್ಲಿ ಮತ್ತು ಸೂರತ್‌ನಲ್ಲಿರುವ ನೀರವ್ ಒಡೆತನದ ಫೈರ್‌ಸ್ಟಾರ್ ಇಂಟರ್‌ನ್ಯಾಷನಲ್ ಮತ್ತು ಪೌಂಡ್ರಾ ಎಂಟರ್‌ಪ್ರೈಸಸ್‌ಗೆ ಸೇರಿದ ₹72 ಕೋಟಿ ಮೌಲ್ಯದ ಆಸ್ತಿಯೂ ಸೇರಿದೆ.

ಅಂಧೇರಿಯಲ್ಲಿರುವ ₹63 ಕೋಟಿ ಮಾರುಕಟ್ಟೆ ಮೌಲ್ಯದ ‘ಎಚ್‌ಸಿಎಲ್ ಹೌಸ್’ ಅನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ನೀರವ್ ಮೋದಿ, ಅವರ ಸಹೋದರ ನೀಶಲ್ ಮೋದಿ ಮತ್ತು ಇವರಿಬ್ಬರ ಒಡೆತನದ ಸಂಸ್ಥೆಗಳ 108 ಬ್ಯಾಂಕ್ ಖಾತೆಗಳನ್ನೂ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಕಳೆದ ವಾರ ತನಿಖಾ ಸಂಸ್ಥೆಯು ನೀರವ್‌ ಮೋದಿಯ ಚಿಕ್ಕಪ್ಪ ಮೆಹುಲ್‌ ಚೋಕ್ಸಿ ಒಡೆತನದ ಗೀತಾಂಜಲಿ ಸಮೂಹದಿಂದ ಸುಮಾರು ₹85 ಕೋಟಿ ಮೌಲ್ಯದ 34,000 ಆಭರಣಗಳನ್ನು ಜಪ್ತಿ ಮಾಡಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT