ಗುರುವಾರ , ಆಗಸ್ಟ್ 13, 2020
24 °C

ರಫೇಲ್‌ ಒಪ್ಪಂದದಲ್ಲಿ ರಿಲಯನ್ಸ್‌ ಜೊತೆ ಬಲವಂತದ ಒಪ್ಪಂದ: ಡಸಾಲ್ಟ್‌ ಕಂಪನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯಾರಿಸ್‌: ರಫೇಲ್‌ ಖರೀದಿ ಒಪ್ಪಂದ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೆ ಮಹತ್ವದ ದಾಖಲೆಗಳು ಬಿಡುಗಡೆಯಾಗಿದ್ದು ರಿಲಯನ್ಸ್‌ ಕಂಪನಿಯನ್ನು ಬಲವಂತವಾಗಿ ಪಾಲುದಾರ ಕಂಪೆನಿಯನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ಫ್ರಾನ್ಸ್‌ನ ಡಸಾಲ್ಟ್‌ ಕಂಪೆನಿ ಹೇಳಿರುವ ಪತ್ರವೊಂದು ಬಿಡುಗಡೆಯಾಗಿದೆ. 

ಫ್ರೆಂಚ್‌ನ  ’ಪೋರ್ಟಲ್ ಏವಿಯೇಶನ್‌’  ಎಂಬ ಬ್ಲಾಗ್‌ ಪತ್ರವನ್ನು ಬಿಡುಗಡೆ ಮಾಡಿದೆ. ರಫೇಲ್ ಯುಧ್ಧ ವಿಮಾನಗಳನ್ನು ನಿರ್ಮಾಣ ಮಾಡುತ್ತಿರುವ ಡಸಾಲ್ಟ್‌ ಕಂಪೆನಿ  ತಮ್ಮ ಕಾರ್ಮಿಕ ಸಂಘಟನೆಗಳ ಜೊತೆ ನಡೆಸಿದ ಮಾತುಕತೆ ವೇಳೆ ಅನಿಲ್‌ ಅಂಬಾನಿ ಕಂಪೆನಿಯನ್ನು ಬಲವಂತವಾಗಿ ಪಾಲುದಾರ ಕಂಪನಿಯನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ. 

 ಸಿಎಫ್‌ಡಿಟಿ ಮತ್ತು ಸಿಜಿಟಿ ಎಂಬ ಎರಡು ಕಾರ್ಮಿಕ ಸಂಘಟನೆಗಳು ಬಿಡುಗಡೆ ಮಾಡಿರುವ ಪತ್ರದಲ್ಲಿ ರಿಲಯನ್ಸ್‌ ಜೊತೆ ಬಲವಂತವಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಮದು ಡಸಾಲ್ಟ್‌ ಕಂಪೆನಿ ಹೇಳಿರುವುದನ್ನು ಉಲ್ಲೇಖಿಸಲಾಗಿದೆ. 

2017 ಮೇ 13ರಂದು ನಡೆದು ಕೆಲವು ನಿಮಿಷಗಳ ಮಾತುಕತೆಯನ್ನು ವಿವರಗಳನ್ನು ಕಾರ್ಮಿಕ ಸಂಘಟನೆಗಳು ಬಿಡುಗಡೆಗೊಳಿಸುವ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. 

ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಆರೋಪಿಸಿದೆ. ಇದು ₹59 ಸಾವಿರ ಕೋಟಿ ಮೊತ್ತದ ಯೋಜನೆಯಾಗಿದೆ. 

ಇವನ್ನೂ ಓದಿ

ರಫೇಲ್‌ ಯುದ್ಧ ವಿಮಾನ ಖರೀದಿ: ₹ 70 ಸಾವಿರ ಕೋಟಿ ಹಗರಣ

ರಫೇಲ್‌ ಸ್ವಾಗತಕ್ಕೆ ಸದ್ದಿಲ್ಲದೆ ಸಿದ್ಧತೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು