ಕೋರ್ಟ್‌ಗೆ ರಫೇಲ್‌ ಮಾಹಿತಿ ನೀಡಲು ಕೇಂದ್ರ ಹಿಂಜರಿಕೆ

7
ರಾಷ್ಟ್ರೀಯ ಹಿತಾಸಕ್ತಿಯ ಕಾರಣ ನೀಡಿದ ಸರ್ಕಾರ: ‘ಸುಪ್ರೀಂ’ ತರಾಟೆ

ಕೋರ್ಟ್‌ಗೆ ರಫೇಲ್‌ ಮಾಹಿತಿ ನೀಡಲು ಕೇಂದ್ರ ಹಿಂಜರಿಕೆ

Published:
Updated:

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿ ಅಡಗಿದೆ. ಇದು ಗೌಪ್ಯ ವಿಷಯವಾದ ಕಾರಣ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ವಾದಿಸಿದೆ.

ಸರ್ಕಾರ ಮತ್ತು ವಿರೋಧ ಪಕ್ಷಗಳ ಮಧ್ಯೆ ರಫೇಲ್‌ ಖರೀದಿ ಸಂಬಂಧ ಹಣಾಹಣಿ ನಡೆಯುತ್ತಿದೆ. ಒಪ್ಪಂದದ ಬಗ್ಗೆ ಮಾಹಿತಿ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಾಮಾನ್ಯ ಅರ್ಜಿಗಳಲ್ಲ. ರಾಜಕೀಯ ಪ್ರೇರಿತವಾಗಿವೆ. ಹೀಗಾಗಿ ಅವನ್ನು ವಜಾಗೊಳಿಸಿ ಎಂದು ವೇಣುಗೋಪಾಲ್‌ ಮನವಿ ಮಾಡಿದರು.

ಆದರೆ, ಅಟಾರ್ನಿ ಜನರಲ್‌ ಅವರ ವಾದವನ್ನು ಸುಪ್ರೀಂ ಕೋರ್ಟ್ ಸಾರಾಸಗಟಾಗಿ ತಳ್ಳಿ ಹಾಕಿತು.

ಫ್ರಾನ್ಸ್‌ನ ಡಸಾಲ್ಟ್ ಕಂಪನಿಯಿಂದ 36 ರಫೇಲ್‌ ಯುದ್ಧ ವಿಮಾನ ಖರೀದಿ ವ್ಯವಹಾರದಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಅರ್ಜಿದಾರ ಎಂ.ಎಲ್‌. ಶರ್ಮಾ ವಾದಿಸಿದ್ದಾರೆ.

ಎಲ್ಲ ನಿಯಮಗಳನ್ನು ಉಲ್ಲಂಘಿಸಿ ನಡೆದಿರುವ ಒಪ್ಪಂದವನ್ನು ರದ್ದುಗೊಳಿಸುವಂತೆ ಮತ್ತೊಬ್ಬ ಅರ್ಜಿದಾರ ವಿನೀತ್‌ ಧಂಡಾ ಪ್ರತ್ಯೇಕವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ವಿಮಾನದ ದರ ಕೇಳಿಲ್ಲ:

‘ರಫೇಲ್‌ ವಿಮಾನದ ದರ ಮತ್ತು ತಾಂತ್ರಿಕ ವಿವರಗಳನ್ನು ನಾವು ಕೇಳಿಲ್ಲ. ಅದರ ಅಗತ್ಯವೂ ನ್ಯಾಯಾಲಯಕ್ಕೆ ಇಲ್ಲ’ ಎಂದು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

‘ರಫೇಲ್‌ ಖರೀದಿಸಲು ಕೈಗೊಂಡ ನಿರ್ಧಾರ ಪ್ರಕ್ರಿಯೆ ಬಗ್ಗೆ ಮಾಹಿತಿ ಕೊಟ್ಟರೆ ಸಾಕು’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಮಾಹಿತಿ ನೀಡಲು ನಿರಾಕರಿಸಿದ ಕೇಂದ್ರಕ್ಕೆ ಸೂಚಿಸಿದೆ.

ಈ ಹಂತದಲ್ಲಿ ಸರ್ಕಾರಕ್ಕೆ ನೋಟಿಸ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಪೀಠ, ಮುಂದಿನ ವಿಚಾರಣೆಯನ್ನು ಅ.31ಕ್ಕೆ ನಿಗದಿಪಡಿಸಿದೆ.

ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಫ್ರಾನ್ಸ್‌ನ ಡಸಾಲ್ಟ್ ಕಂಪನಿಯಿಂದ 36 ರಫೇಲ್‌ ಯುದ್ಧ ವಿಮಾನ ಖರೀದಿ ವ್ಯವಹಾರದಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಅರ್ಜಿದಾರ ಎಂ.ಎಲ್‌. ಶರ್ಮಾ ವಾದಿಸಿದ್ದಾರೆ.

ಎಲ್ಲ ನಿಯಮಗಳನ್ನು ಉಲ್ಲಂಘಿಸಿ ನಡೆದಿರುವ ಒಪ್ಪಂದವನ್ನು ರದ್ದುಗೊಳಿಸುವಂತೆ ಮತ್ತೊಬ್ಬ ಅರ್ಜಿದಾರ ವಿನೀತ್‌ ಧಂಡಾ ಪ್ರತ್ಯೇಕವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಯುಪಿಎ ಮತ್ತು ಎನ್‌ಡಿಎ ಅವಧಿಯಲ್ಲಿ ನಿಗದಿಪಡಿಸಿದ್ದ ಖರೀದಿ ದರ ಹಾಗೂ ಒಪ್ಪಂದದ ಮಾಹಿತಿಯನ್ನು ಸುಪ್ರೀಂಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕಾಂಗ್ರೆಸ್‌ ನಾಯಕ ಮತ್ತು ಆರ್‌ಟಿಐ ಕಾರ್ಯಕರ್ತ ತೆಹಸೀನ್‌ ಪೋನಾವಾಲಾ ಅರ್ಜಿ ಸಲ್ಲಿಸಿದ್ದರು.

ಫ್ರಾನ್ಸ್‌ನ ಡಸಾಲ್ಟ್ ಕಂಪನಿಯು ಅನಿಲ್ ಅಂಬಾನಿ ಅವರ ರಿಲಯನ್ಸ್‌ ಡಿಫೆನ್ಸ್‌ ಕಂಪನಿಗೆ ನೀಡಿದ ಗುತ್ತಿಗೆ ಬಗ್ಗೆ ಮಾಹಿತಿ ಕೋರಿದ್ದ ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್ ತನಿಖೆಗೆ ಎಸ್ಐಟಿ ರಚಿಸುವಂತೆ ಕೋರಿದ್ದರು.

ಒಲಾಂಡ್‌ ಬಾಂಬ್‌

ರಫೇಲ್‌ ಒಪ್ಪಂದದಲ್ಲಿ ಉದ್ಯಮಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್‌ ಕಂಪೆನಿಯನ್ನು ಭಾರತೀಯ ಪಾಲುದಾರನನ್ನಾಗಿ ಪರಿಗಣಿಸುವಂತೆ ಭಾರತ ಸರ್ಕಾರ ಒತ್ತಡ ಹೇರಿತ್ತು ಎಂದು ಫ್ರಾನ್ಸ್‌ ಮಾಜಿ ಅಧ್ಯಕ್ಷ ಒಲಾಂಡ್ ಈಚೆಗೆ ಹೊಸ ಬಾಂಬ್‌ ಸಿಡಿದ್ದರು.

ದೇಶದ ರಾಜಕೀಯ ವಲಯದಲ್ಲಿ ಇದು ಭಾರಿ ಬಿರುಗಾಳಿ ಎಬ್ಬಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

* ರಫೇಲ್‌ ಖರೀದಿ ನಿರ್ಧಾರ ಕೈಗೊಂಡ ಮಾಹಿತಿ ಕೊಟ್ಟರೆ ಸಾಕು. ವಿಮಾನಗಳ ಬೆಲೆ,ತಾಂತ್ರಿಕ ವಿವರಗಳ ಅಗತ್ಯ ನ್ಯಾಯಾಲಯಕ್ಕೆ ಇಲ್ಲ
– ರಂಜನ್ ಗೊಗೊಯಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ 

* ರಫೇಲ್‌ ಖರೀದಿ ಒಪ್ಪಂದ ಮಾಹಿತಿ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಉದ್ದೇಶ ಇಲ್ಲ. ಅವೆಲ್ಲವೂ ರಾಜಕೀಯ ಪ್ರೇರಿತ
– ಕೆ.ಕೆ. ವೇಣುಗೋಪಾಲ್‌, ಅಟಾರ್ನಿ ಜನರಲ್‌ 

ರಫೇಲ್‌ ಖರೀದಿ ಒಪ್ಪಂದವನ್ನು ಎನ್‌ಡಿಎ ಸರ್ಕಾರ ತನಗೆ ಬೇಕಾಗದಂತೆ ತಿರುಚಿದೆ. ಇದಕ್ಕೆ ಆಕ್ಷೇಪ ಎತ್ತಿದ ಅಧಿಕಾರಿಗಳಿಗೆ ಶಿಕ್ಷೆ ನೀಡಿದೆ.
– ಜೈಪಾಲ್‌ ರೆಡ್ಡಿ, ಕಾಂಗ್ರೆಸ್‌ ವಕ್ತಾರ

* ರಫೆಲ್‌ ಒಪ್ಪಂದದಿಂದ ದೇಶಕ್ಕೆ ಲಾಭವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಉದ್ಯಮಿ ಅನಿಲ್‌ ಅಂಬಾನಿ ಅವರಿಗೆ ಮಾತ್ರ ಭಾರಿ ಲಾಭವಾಗಿದೆ
- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !