ರಫೇಲ್‌ ಖರೀದಿ ನಿರ್ಧಾರ ಮಾಹಿತಿ ಕೇಳಿದ ‘ಸುಪ್ರೀಂ’

7

ರಫೇಲ್‌ ಖರೀದಿ ನಿರ್ಧಾರ ಮಾಹಿತಿ ಕೇಳಿದ ‘ಸುಪ್ರೀಂ’

Published:
Updated:

ನವದೆಹಲಿ: ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನ ಖರೀದಿಗೆ ಕೈಗೊಂಡ ನಿರ್ಧಾರಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ‘ಮುಚ್ಚಿದ ಲಕೋಟೆ’ಯಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ವಿಮಾನ ಖರೀದಿಯ ದರ ಮತ್ತು ಬಿಡಿಭಾಗಗಳ ಹೊಂದಾಣಿಕೆಯಂತಹ ತಾಂತ್ರಿಕ ಮಾಹಿತಿ ಬೇಡ. ಅವನ್ನು ಬಿಟ್ಟು ಇನ್ನುಳಿದ ವಿವರಗಳನ್ನು ಇದೇ 29ರ ಒಳಗಾಗಿ ಸಲ್ಲಿಸುವಂತೆ ಕೋರ್ಟ್ ಆದೇಶಿಸಿದೆ.

ವಕೀಲರಾದ ಎಂ.ಎಲ್‌. ಶರ್ಮಾ ಮತ್ತು ವಿನೀತ್‌ ಧಂಡಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಮೂವರು ಸದಸ್ಯರ ಪೀಠ ವಿಚಾರಣೆ ನಡೆಸಿತು.

ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಕೆ.ಎಂ ಜೋಸೆಫ್ ಅವರಿದ್ದ ಪೀಠ, ಮುಂದಿನ ವಿಚಾರಣೆಯನ್ನು ಅ.31ಕ್ಕೆ ನಿಗದಿಪಡಿಸಿದೆ.

ರಫೇಲ್‌ ಖರೀದಿ ಒಪ್ಪಂದ ಮಾಹಿತಿ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ರಾಜಕೀಯ ಪ್ರೇರಿತ ಎಂದು ಸರ್ಕಾರದ ವಕೀಲ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಆರೋಪಿಸಿದರು.

ಕೋರ್ಟ್‌ಗೆ ರಫೇಲ್‌ ಮಾಹಿತಿ ನೀಡಲು ಕೇಂದ್ರ ಹಿಂಜರಿಕೆ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿ ಅಡಗಿದೆ. ಇದು ಗೌಪ್ಯ ವಿಷಯವಾದ ಕಾರಣ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ವಾದಿಸಿದೆ.

ಸರ್ಕಾರ ಮತ್ತು ವಿರೋಧ ಪಕ್ಷಗಳ ಮಧ್ಯೆ ರಫೇಲ್‌ ಖರೀದಿ ಸಂಬಂಧ ಹಣಾಹಣಿ ನಡೆಯುತ್ತಿದೆ. ಹೀಗಾಗಿ ಈ ಅರ್ಜಿಗಳನ್ನು ವಜಾಗೊಳಿಸಿ ಎಂದು ವೇಣುಗೋಪಾಲ್‌ ಮನವಿ ಮಾಡಿದರು.

ಆದರೆ, ಅಟಾರ್ನಿ ಜನರಲ್‌ ಅವರ ವಾದವನ್ನು ಸುಪ್ರೀಂ ಕೋರ್ಟ್ ಸಾರಾಸಗಟಾಗಿ ತಳ್ಳಿ ಹಾಕಿತು.

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !